ದುರವ್ಯಸನದಿಂದ ದೂರ ಉಳಿಯುವ ಸಂಕಲ್ಪ ಮಾಡಿ: ಸುತ್ತೂರು ಶ್ರೀ

ತಿ.ನರಸೀಪುರ : ಜು.28:- ಮನುಷ್ಯ ದುಶ್ವಟಗಳಿಗೆ ಬಲಿಯಾಗುವುದು ಸುಲಭ ಆದರಿಂದ ಹೊರ ಬರುವುದು ಬಹಳ ಕಷ್ಟವಾದ ಕಾರಣ ದುರವ್ಯಸನಗಳಿಂದ ದೂರ ಉಳಿಯುವ ಸಂಕಲ್ಪ ಮಾಡುವಂತೆ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕರೆ ನೀಡಿದರು
ಪಟ್ಟಣದ ಜೆಎಸ್ ಎಸ್ ಸಭಾಭವನದಲ್ಲಿ ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾ ಸಂಸ್ಥಾನ ಮಠ, ಜೆಎಸ್‍ಎಸ್ ವಿದ್ಯಾಪೀಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಡನೆ ನಡೆದ ಹತ್ತು ದಿನಗಳ ಅವಧಿಯ ಕುಡಿತ ಚಟ ಬಿಡಿಸುವ ಶಿಬಿರ ದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿತ ಕಲಿಯಲು ಕೆಲವರು ಕಾರಣ ಹೇಳುತ್ತಾರೆ ಅದರೆ ಅವು ಕಾರಣಗಳಲ್ಲ. ಕುಡಿತವನ್ನು ಬಿಡಲು ಪ್ರತಿನಿತ್ಯ ಕುಡಿಯುವ ವ್ಯಕ್ತಿ ಇಂದು ನಾನು ಕುಡಿಯುವುದಿಲ್ಲ. ಎಂಬ ಮನಸ್ಥಿತಿಯನ್ಬು ಬೆಳೆಸಿಕೊಳ್ಳಬೇಕು. ದುರಭ್ಯಾಸ. ಗಳನ್ನು ಕಾರಣಗಳಿಗೆ ಬೆಳಸಿಕೊಳ್ಳಬಾರದು. ಸದ್ಭಾವನೆಯಿಂದ, ಸನ್ನಡತೆಯಿಂದ ಬದುಕುವುದನ್ಬು ಕಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ಕುಡಿತದಿಂದಾಗಿ ಸಾಮಾಜಿಕ ದುಷ್ಫರಿಣಾಮಗಳ ಬಗ್ಗೆ ತಿಳಿದಾಗಲೇ ನಿಮಗೆ ಅರಿವಾಗುತ್ತದೆ. ಸಮಾಜ ಮುಖಿ ಚಿಂತನೆಗಳ ಅಳವಡಿಸಿಕೊಂಡು ದುಶ್ಚಟಗಳಿಂದ ಮುಕ್ತರಾಗುವಂತೆ ಅವರು ಕಿವಿ ಮಾತು ಹೇಳಿದರು
ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ ಶಿಬಿರದ ಬಳಿಕ ಕುಡಿತದಿಂದ ಮುಕ್ತರಾಗಿ ಹೊಸ ಜೀವನ ರೂಪಿಸಿಕೊಳ್ಳಲು ಸುತ್ತೂರು ಶ್ರೀಗಳು ನಿಮಗೊಂದು ಅವಕಾಶ ಕಲ್ಪಿಸಿದ್ದಾರೆ. ಮತ್ತೆ ವ್ಯಸನದತ್ತ ಸುಳಿಯದೇ ಉತ್ತಮವಾದ ಜೀವನಕ್ಕಾಗಿ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ನೀವು ಸಮಾಜಕ್ಕೆ ಮಾದರಿಯಾಗುವಂತೆ ಸಲಹೆ ಮಾಡಿದರು. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಿಂತನೆಗಳಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಜೆಎಸ್‍ಎಸ್ ಮಠ ಹಾಗೂ ಸಂಸ್ಥೆಗಳು ನಮ್ಮಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ವಾಟಾಳು ಡಾ.ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ, ಎಂ.ಎಲ್ ಹುಂಡಿಯ ಗೌರಿಶಂಕರ ಸ್ವಾಮೀಜಿ ಮಾತನಾಡಿದರು. ಸುತ್ತೂರು ಮಠದ ಕಿರಿಯ ಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಚುಂಚನಹಳ್ಳಿ ಚನ್ನಬಸವಸ್ವಾಮೀಜಿ, ಪುರಸಭಾಧ್ಯಕ್ಷ ಮದನ್ ರಾಜ್, ಡಾ. ಸೋಮಶೇಖರ್, ವೀರಶೈವ ಮಹಾಸಭಾದ ಆದ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಕೆ.ಎನ್. ಪ್ರಭುಸ್ವಾಮಿ, ಹೋಟೆಲ್ ರಾಜಣ್ಣ, ಜಿ.ಎಲ್ ಉಮೇಶ್, ವ್ಯವಸ್ಥಾಪಕ ಯೋಗೇಶ್, ಮಾಜಿ ಪಪಂ ಅಧ್ಯಕ್ಷ ವಿರೇಶ್ ಶಸ್ತ್ರಚಿಕಿತ್ಸಾ ತಜ್ಞ ಡಾ.ರೇವಣ್ಣ, ಜಿ.ಪಂ ಮಾಜಿ ಸದಸ್ಯ ಜಯಪಾಲ್ ಭರಣಿ, ಪುರಸಭಾ ಸದಸ್ಯ ಕಿರಣ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ತೋಂಟೇಶ್, ಮೂಗೂರು ಕುಮಾರಸ್ವಾಮಿ, ಜ್ಞಾನೆಂದ್ರಮೂರ್ತಿ, ಡೇರಿ ಗುರುಮೂರ್ತಿ, ಶಂಭುದೇವನಪುರ ರಮೇಶ್, ನಾಗೇಶ್, ಬೆನಕನಹಳ್ಳಿ ವಿಜಯ್ ಕುಮಾರ್ ಕಾರ್ ಮಲ್ಲಪ್ಪ ರಾಜೇಶ್ ಮತ್ತಿತರರು ಇದ್ದರು.