ದುಬೈ 1,456 ಗ್ರಾಂ ಚಿನ್ನ ವಶ

ಕೊಚ್ಚಿ (ಕೇರಳ), ನ. ೮- ದುಬೈನಿಂದ ಅಕ್ರಮವಾಗಿ ಸಾಗಿಸಿಕೊಂಡು ಬಂದ ಆರೋಪಿಯನ್ನು ಬಂಧಿಸಿ ೧,೪೫೬ ಗ್ರಾಂ ಚಿನ್ನವನ್ನು ಗುಪ್ತಚರ ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಣ್ಣೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿಳಿದ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ತಪಾಸಣೆ ವೇಳೆ ಅಕ್ರಮವಾಗಿ ಚಿನ್ನ ಸಾಗಿಸಿಕೊಂಡು ಬಂದಿರುವುದು ಪತ್ತೆಯಾಗಿದೆ.
ಪ್ರಯಾಣಿಕರಿಂದ ೧,೪೫೬ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಕೊಚ್ಚಿಯ ಕಸ್ಟಮ್ಸ್ ಕಮಿಷನರೇಟ್ (ಪ್ರಿವೆಂಟಿವ್) ತಿಳಿಸಿದೆ.