ದುಬೈ ಕನ್ನಡಿಗರ ಮನ ಗೆದ್ದ ಚಿರಂತನ ಕಲಾವಿದೆಯರು

ಸಂಜೆವಾಣಿ ವಾರ್ತೆ

ದಾವಣಗೆರೆ. 3; ದುಬೈ ಕರ್ನಾಟಕ ಸಂಘ “ಕರ್ನಾಟಕ  ರಾಜ್ಯೋತ್ಸವ” ವನ್ನು  ಅಲ್ ನಸರ್ ಲೀಸರ್ ಲ್ಯಾಂಡ್, ಐಸ್ ರಿಂಕ್,    ನಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸಿದರು. ಅಲ್ಲಿ ‘ಚಿರಂತನ’ ತಂಡ ವಿಶೇಷ ನೃತ್ಯ ಪ್ರದರ್ಶನಗಳನ್ನು ನೀಡಿ ದುಬೈ ಕನ್ನಡಿಗರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದರು.ನಾಡ ದೇವತೆ ಚಾಮುಂಡೇಶ್ವರಿಯ ನೃತ್ಯ ರೂಪಕವನ್ನು ‘ಚಿರಂತನ’ದ ಕಲಾವಿದೆಯರು ಬಹಳ ಆಕರ್ಷಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಜೊತೆಗೆ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಸುಮಲತಾ ಅಂಬರೀಶ್ ರವರು ಕೂಡ ತಮ್ಮ ಭಾಷಣದಲ್ಲಿ ‘ಚಿರಂತನ’ ತಂಡದ ವಿದ್ಯಾರ್ಥಿನಿಯರನ್ನು ಕುರಿತು ಪ್ರಶಂಸೆ ನೀಡಿದ್ದು ವಿಶೇಷವಾಗಿತ್ತು, ಶ್ರೀಯುತ ರಾಕಲೈನ್ ವೆಂಕಟೇಶ್ ರವರು ಕೂಡ ಚಿರಂತನದ ನೃತ್ಯ ಪ್ರದರ್ಶನ ಕ್ಕೆ ತಮ್ಮ  ಭಾಷಣದಲ್ಲಿ ಮೆಚ್ಚುಗೆ ಸೂಚಿಸಿದರು. ವಿಭಿನ್ನ ಜಾನಪದ ನೃತ್ಯಗಳನ್ನು  ತಂಡ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.ದುಬೈನ ಅತ್ಯಂತ ದೊಡ್ಡ ವಿಜೃಂಭಣೆಯ ಈ ರಾಜ್ಯೋತ್ಸವ ಸಮಾರಂಭದಲ್ಲಿ ಇಡೀ ಕಾರ್ಯಕ್ರಮದ ಆಯೋಜನೆಯಲ್ಲಿ ‘ಚಿರಂತನ’ ಕರ್ನಾಟಕ ಸಂಘ ದುಬೈ ಜೊತೆಗೆ ಕೈಜೋಡಿಸಿ ಕಳೆದ ಮೂರು ತಿಂಗಳಿಂದಲೂ ತಯಾರಿ ನಡೆಸಿತ್ತು, ದಾವಣಗೆರೆಯ ಸಂಸ್ಥೆಯೊಂದು ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ನೀಡುವುದಷ್ಟೇ ಅಲ್ಲದೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಲ್ಲೂ ಬೇರೆ ದೇಶದ ಸಂಸ್ಥೆಗಳೊಂದಿಗೆ ಕೈಜೋಡಿಸುವುದು ದಾವಣಗೆರೆಗೆ ಹೆಮ್ಮೆ ತರುವ ವಿಷಯ, ಚಿರಂತನದ ಕಾರ್ಯಕ್ರಮ ಸಹಕಾರಕ್ಕೆ ದುಬೈ ಕರ್ನಾಟಕದ ಸಂಘದ ಎಲ್ಲಾ ಪದಾಧಿಕಾರಿಗಳು ಮನಸಾರೆ ಪ್ರಶಂಶಿಸಿದ್ದಾರೆ ಹಾಗೂ ಅಭಿನಂದಿಸಿದ್ದಾರೆ.