ದುಬಾರಿ ಮೊತ್ತಕ್ಕೆ ಆರ್‌ಆರ್‌ಆರ್ ಡಿಜಿಟಲ್ ಹಕ್ಕು

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ “ಅರ್ ಆರ್ ಆರ್ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ತಯಾರಾಗಿದೆ.
ಕೊರೊನಾ ಸೋಂಕಿನಿಂದ ಲಾಕ್ ಡೌನ್ ಇರುವುರಿಂದ ಚಿತ್ರ ತೆರೆಗೆ ಬರುವುದು ವಿಳಂಬವಾಗಿದೆ . ಈ ನಡುವೆ “ಆರ್ ಆರ್ ಆರ್ ” ಚಿತ್ರ ಬರೋಬ್ಬರಿ ೩೨೫ ಕೋಟಿ ರೂಪಾಯಿಗೆ ಡಿಜಿಟಲ್ ಹಕ್ಕುಗಳು ಮಾರಾಟವಾಗಿದೆ ಎನ್ನುವ ಮಾತುಗಳು ತೆಲುಗು ಚಿತ್ರರಂಗದಿಂದ ಕೇಳಿಬಂದಿದೆ.
ತೆಲುಗು ,ತಮಿಳು, ಕನ್ನಡ ,ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಹಕ್ಕುಗಳನ್ನು ಜಿ ವಾಹಿನಿ ಸಮೂಹ ಖರೀದಿಸಿದೆ ಎನ್ನಲಾಗಿದೆ.
ತೆಲುಗು ಚಿತ್ರರಂಗದ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್, ಮತ್ತು ರಾಮ್ ಚರಣ್ ತೇಜಾ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಅದ್ದೂರಿ ವೆಚ್ಚದ ಚಿತ್ರ ಇದಾಗಿದೆ. “ಆರ್ ಆರ್‌ಆರ್ ಹೆಸರಿನ ಮೂಲಕವೇ ತೆಲುಗು ಸೇರಿದಂತೆ ಭಾರತೀಯ ಚಿತ್ರರಂಗದ ಮಂದಿಯಲ್ಲಿ ಕುತೂಹಲ ಕೆರಳಿಸಿರುವ ಚಿತ್ರ .ದುಬಾರಿ ಮೊತ್ತದಲ್ಲಿ ಚಿತ್ರೀಕರಣವಾಗಿದೆ. ಚಿತ್ರ ಬಿಡುಡೆಗೆ ಮುನ್ನ ಡಿಜಿಟಲ್ ಹಕ್ಕು ಮಾರಾಟವಾಗಿರುವುದು ಚಿತ್ರತಂಡಕ್ಕೆ ಕೊರೊನಾ ಸಂಕಷ್ಟದ ಸಮಯದಲ್ಲಿ ಆನೆ ಬಲ ಬಂದಂತಾಗಿದೆ.
ಲಾಕ್ ಡೌನ್ ತೆರವಾದ ಬಳಿಕ ತೆಲುಗು ಸೇರಿದಂತೆ ಭಾರತೀಯ ಭಾಷೆ
ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.
ತೆಲುಗು ಚಿತ್ರರಂಗದ ಇಬ್ಬರು ಖ್ಯಾತ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೇಜಾ ಅವರ ಜೊತೆ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೆಲಸ ಮಾಡಿದ್ದಾರೆ .ಈ ಹಿಂದೆ ಈ ಇಬ್ಬರೂ ನಟರಿಗೆ
ಚಿತ್ರ ನಿರ್ದೇಶನ ಮಾಡಿದ್ದರು.ಆ ಚಿತ್ರಗಳು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದ್ದವು. ಇದೀಗ ಇಬ್ಬರೂ ನಟರನ್ನು ಹಾಕಿ
ಕೊಂಡು ಚಿತ್ರ ಮಾಡಿರುವುದು ತೆಲುಗು ಚಿತ್ರರಂಗದಲ್ಲಿ ನಿರೀಕ್ಷೆಯನ್ನು ಮಾಡಿದೆ. ಇಬ್ಬರು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ.