ಸಿಂಧನೂರು,ಜೂ.೨೦-
ನಗರದಲ್ಲಿರುವ ಬಾರ್ ಆಂಡ್ ರೇಸ್ಟೊರೆಂಟ್‌ಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೂಲಿಗೆ ಮಾಡುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕ್ರಮ ಕೈಗೊಳ್ಳದೆ ಮೌನ ವಹಿಸಿರುವದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರದಲ್ಲಿ ಗ್ರಾಹಕರಿಗೆ ಬಾರ್ ಮತ್ತು ರೇಸ್ಟೊರೆಂಟ್‌ಗಳಲ್ಲಿ ಮದ್ಯ ಮಾರಾಟ ಮಾಡಬೇಕು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆ ಗೆ ನಗರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವದು ಮದ್ಯ ಪ್ರೀಯರ ಆರೋಪ ಮಾಡುತ್ತಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣ ಎದುರಿಗೆ ಇರುವ ಸ್ಕೈಲ್ಯಾಂಡ್ ಬಾರ್ ಆಂಡ್ ರೇಸ್ಟೊರೆಂಟ್‌ನಲ್ಲಿ ಒಅ ಆ೦Weಟಟs ವೀಕ್ಸಿ, ಎಂಆರ್‌ಪಿ ಬೆಲೆ ೯೯ ರೂಪಾಯಿ ಇದೆ ಆದರೆ ೧೨೫, ರೂಪಾಯಿಗೆ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೂಲಿಯಾಲಾಗುತ್ತಿದೆ. ಆದರೆ ಇದೆ ಮದ್ಯ ಬೇರೆ ಬಾರಿನಲ್ಲಿ ೧೦೫,ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಯಾಕೆ ಎನ್ನುವದು ಪ್ರಶ್ನೆಯಾಗಿದೆ.
ನಗರದ ಈರಪ್ಪ ಎನ್ನುವ ಗ್ರಾಹಕ ಸ್ಕೈಲ್ಯಾಂಡ್ ಬಾರಗೆ ಹೋಗಿ ಮಧ್ಯ ಕುಡಿದಿದ್ದು ೧೨೫,ರೂ.ಹಣ ಕೇಳಿದಾಗ ಎಂಆರ್‌ಪಿ ದರ ೯೯ ರೂ.ಇದೆ ಯಾಕೆ ೧೨೫ ರೂ ಹೆಚ್ಚಿಗೆ ಕೇಳುತ್ತೀರಿ ನಾನು ಕೊಡುವದಿಲ್ಲ ಎಂದಾಗ ಜಗಳ ನಡೆದು ಅಬಕಾರಿ ಇಲಾಖೆಯ ಸಿಪಿಐ ಸಿದ್ಧಾರೆಡ್ಡಿಗೆ ಈರಪ್ಪ ದೂರವಾಣಿ ಮಾಡಿ ಹೇಳಿದಾಗ ೯೯ ರೂ.ತೆಗದುಕೊಳ್ಳಿ ಎಚ್ಚಿಗೆ ತೆಗೆದುಕೊಳ್ಳಬೇಡಿ ಎಂದು ಸಂತೋಷ ಎನ್ನುವ ವ್ಯಕ್ತಿಗೆ ಹೇಳಿದಾಗ ಸೌಜನ್ಯಕ್ಕೆ ಆದರು ಸರಿ ಎನ್ನದೆ ಇದೆ ಬೆಲೆಗೆ ಮಾರಾಟ ಮಾಡುವಂತೆ ನಮ್ಮ ಮಾಲಿಕ ಶರತ ಕುಮಾರ ಹೇಳಿದ್ದಾರೆ ಎನ್ನುತ್ತಾನೆ ಎಂದರೆ ಅಬಕಾರಿ ಇಲಾಖೆ ಅಧಿಕಾರಿಗಳು ಎಷ್ಟು ಪ್ರಮಾಣಿಕ ದಕ್ಷರು ಇದ್ದಾರೆ ಎನ್ನುವದು ಇದರಿಂದ ಗೊತ್ತಾಗುತ್ತಿದೆ.
ಹಣ ಕೊಡಲು ತಡವಾದರೆ ಶರತಕುಮಾರ ಗ್ರಾಹಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಬರುತ್ತಾನೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಬಾಕಾರಿ ಇಲಾಖೆ ಅಧಿಕಾರಿಗಳಿಗೆ ಹೇಳುತ್ತೇವೆ ಎಂದರೆ ಹೇಳಿ ನನಗೇನು ಅವರು ಮಾಡುವದಿಲ್ಲ ಪ್ರತಿ ತಿಂಗಳ ಮಾಮೂಲು ಕೊಡುತ್ತೇನೆ ಎಂದು ಧೈರ್ಯದಿಂದ ಶರತ ಕುಮಾರ ಹೇಳುತ್ತಾನೆ. ಅಲ್ಲದೆ ಇತ ನಡೆಸುವ ಬಾರ್‌ಗಳಲ್ಲಿ ಸ್ವಚ್ಛತೆ ಇಲ್ಲ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದು ಇತನ ಮೇಲೆ ಕ್ರಮ ಕೈಗೊಂಡು ಸ್ಕೈಲ್ಯಾಂಡ್ ಬಾರ್ ಆಂಡ್ ರೇಸ್ಟೊರೆಂಟ್ ಲೈಸನ್ಸ್ ರದ್ದುಗೊಳಿಸುವಂತೆ ಗ್ರಾಹಕ ಈರಪ್ಪ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ರಸೀದಿ ಸಮೇತ ಅಬಕಾರಿ ಇಲಾಖೆಯ ಸಿಪಿಐ ಸಿದ್ಧಾರೆಡ್ಡಿಗೆ ದೂರು ನೀಡಿದ್ದು ಈಗ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೊ ಇಲ್ಲ ಶರತ ಕುಮಾರ ನ್ನು ಕರೆಸಿ ಡಿಲ್ ಕುದಿರಿಸಿಕೊಳ್ಳುತ್ತಾರೊ ಕಾಯ್ದ ನೋಡಬೇಕು.