ದುಬಾರಿ ಜೀನ್ಸ್, ಟಾಪ್ ಧರಿಸಿ ಗಮನ ಸೆಳೆದ ಮಾದಕ ನಟಿ ಮಲೈಕಾ

ಮುಂಬೈ,ಮಾ.೨೧- ನಟ-ನಟಿಯರಿಗೆ ದುಬಾರಿ ದಿರಿಸು ಧರಿಸುವುದು ಮಾಮೂಲಿನ ಸಂಗತಿ. ಆದರೆ ಮಾದಕ ಮೈಮಾಟದ ನಟಿ ಮಲೈಕಾ ಅರೋರಾ ಖಾನ್ ಧರಿಸಿದ್ದ ಜೀನ್ಸ್ ,ಟಾಪ್ ದುಬಾರಿ ಬೆಲೆಯಿಂದ ಗಮನ ಸೆಳೆದಿದೆ.

ಸೀಮಾ ಖಾನ್ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮಕ್ಕೆ ಪುತ್ರ ಅರ್ಹಾನ್ ಖಾನ್ ಅವರೊಂದಿಗೆ ದುಬಾರಿ ಬೆಲೆಯ ಜೀನ್ಸ್ ಮತ್ತು ಟಾಪ್ ಧರಿಸಿ ಮಲೈಕ ಅರೋರಾ ಆಗಮಿಸಿದ್ದರು..ಅದರ ಬೆಲೆ ಕೇಳಿದರೆ ಎಂಥವರು ದಂಗಾಗದೇ ಇರಲಾರದು.

ಜಿಮ್ ಮನ್ ಹೆಸರಿನ ಟಾಪ್ ಗೆ ೫೮,೬೫೦, ಜೆರಾ ಕಂಪನಿಯ ಜೀನ್ಸ್ ೩೭೦೦, ನೆಕ್‌ಲೆಸ್ ೨.೨೦೦ ರೂಪಾಯಿ ಹಾಗು ಬ್ಯಾಗ್ ಟಾಮ್ ಪೋರ್ಡ್ ಬೆಲೆ ೧,೯೬,೬೦೦ರೂಪಾಯಿ ವೆಚ್ಚದಾಗಿತ್ತು ಎಂದು ಹೇಳಲಾಗಿದೆ.

ಸೀಮಾ ಕಾನವರ ಹುಟ್ಟು ಹಬ್ಬದ ಸಮಯದಲ್ಲಿ ಬಾಲಿವುಡ್ ಮಂದಿ ಗಳಾದ ಅನನ್ಯ ಪಾಂಡೆ, ಶನಯ ಕಪೂರ್ ಕರಣ್ ಜೋಹಾರ್, ಅಮೃತಾ ಅರೋರಾ ಲಡಾಕ್ ಸೇರಿದಂತೆ ಅನೇಕ ಗಣ್ಯರು ಮತ್ತು ನಟ-ನಟಿಯರು ಪಾಲ್ಗೊಂಡಿದ್ದರು.

ಮಾದಕ ನಟಿ ಮಲೈಕಾ ಅರೋರ ಧರಿಸಿದ್ದ ಪ್ಯಾಂಟ್ ,ಟಾಪ್ ನೆರೆದಿದ್ದ ನಟ-ನಟಿಯರ ಗಮನ ಸೆಳೆದಿದೆ.ನಟಿ ಮಲೈಕಾ ಅವರು ಧರಿಸಿದ್ದ ಪ್ಯಾಂಟ್ ಗಿಂತ ಟಾಪ್ ಬೆಲೆ ದುಬಾರಿಯಾಗಿದೆ.

ನಟ ನಟಿಯರು ದುಬಾರಿ ಹಣ ನೀಡಿ ಕಡಿಮೆ ಬಟ್ಟೆ ಧರಿಸುವ ಪರಿಪಾಠ ಮುಂದುವರೆದಿದೆ ಕೆಲಸವನ್ನು ಮಾಡಿದ್ದಾರೆ. ಮಾದಕ ಮೈಮಾಟ ಮಲೈಕಾ ಇದೀಗ ಧರಿಸಿದ ಪ್ಯಾಂಟ್ ಮತ್ತು ಟಾಪ್ ಗಮನ ಸೆಳದಿದೆ.