ದುಪ್ಪಟ್ಟು ಬೆಲೆಯಲ್ಲಿ ಕೋವಿಡ್ ರೆಮ್ ಡಿಸಿವರ್ ಮಾರಾಟ: ಕ್ರಮಕ್ಕೆ ಜೈಕರವೇ ಆಗ್ರಹ

ಕಲಬುರಗಿ,ಏ.17- ಕೋವಿಡ್-19 ಎರಡನೆ ಅಲೆ ಹೆಚ್ಚುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ
ಕೋವಿಡ್ ರೋಗಿಗಳ ಜೀವರಕ್ಷಕ ಔಷಧ ಕೋವಿಡ್ ರೆಮ್ ಡಿಸಿವರ್ ಇಂಜೇಕ್ಷನ್ ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಸಕಾಲಕ್ಕೆ ಕೋವಿಡ್ ರೆಮ್ ಡಿಸಿವರ್ ಇಂಜೇಕ್ಷನ್ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಕೇಳಿದರೆ ಇಂಜೇಕ್ಷನ್‍ನ ಅಭಾವವಿದೆ ಎಂದು ಹೇಳುತ್ತಾರೆ ಮತ್ತು ಅವರೇ ಜಾಸ್ತಿ ಬೆಲೆ ಕೊಟ್ಟರೆ ಇಂಜೇಕ್ಷನ್ ತಾವೇ ತೆಗೆದುಕೊಂಡು ಬಂದು ಮಾಡುತ್ತಾರೆ ಈ ಇಂಜೇಕ್ಷನಿನ ಬೆಲೆ ಸುಮಾರು ರೂ. 4000/- ವರೆಗೆ ಇದೆ, ಆದರೆ ಇದನ್ನು ಕಾಳ ಸಂತೆಯಲ್ಲಿ ರೂ. 12000/- ದಿಂದ ರೂ. 15000/- ರವರೆಗೆ ಮಾರಾಟ ಮಾಡುತ್ತಿದ್ದಾರೆ.
ಹೈದ್ರಾಬಾದ, ಸೋಲಾಪೂರ ಮತ್ತು ಬೇರೆ ರಾಜ್ಯಗಳಿಂದ ಬಂದಂತಹ ಜನರಿಗೆ ಜಾಸ್ತಿ ಬೆಲೆಯಲ್ಲಿ ಇಂಜೇಕ್ಷನ್ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕಲಬುರಗಿ ನಗರದ ರೋಗಿಗಳಿಗೆ ಇಂಜೇಕ್ಷನ್ ಇಲ್ಲದೆ ಒದ್ದಾಡುತ್ತಿದ್ದಾರೆ. ಕಾಳ ಸಂತೆಯಲ್ಲಿ ಮಾರುವವರ ದೊಡ್ಡ ಜಾಲವಿದೆ ಇದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಇದರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಶ್ಯಾಮಿಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೇ ಅವಧಿ ಮೂಗಿದ ಔಷಧವನ್ನು ಬಳಸುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ 6 ತಿಂಗಳ ವರೆಗೂ ಅವಧಿ ಮೂಗಿದ ಔಷಧ ಬಳಸಬಹುದು ಎಂದು ಹೇಳುತ್ತಾರೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನ್ನಾಥ ಬಿ. ಹಾಗರಗಿ ಆರೋಪಿಸಿದ್ದಾರೆ.
ಈ ಕಳ್ಳಸಂತೆಯ ವ್ಯವಹಾರದಲ್ಲಿ ಶ್ಯಾಮಿಲಾಗಿರುವವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. ಒಂದೇ ವೇಳೆ ಮುಂದೆ ಬರುವ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಗ್ರವಾಗಿ ಹೋರಾಟ ಮಾಡಲಾಗುವುದು ತಿಳಿಸುತ್ತೇವೆ.
ಪ್ರತಿಭಟನೆಯಲ್ಲಿ ಜಗನ್ನಾಥ ಪಟ್ಟಣಶೆಟ್ಟಿ, ಶರಣು ಖಾನಾಪೂರೆ, ಸಿದ್ದು ಹರಸೂರ, ಶಾಂತಕುಮಾರ ವಾಡೇದ, ಬಾಲರಾಜ ಕೊನಳ್ಳಿ, ಸಂತೋಷ ಪಾಟೀಲ, ವಿವೇಕಾನಂದ ಪಾಂಡವ, ರಾಚಣ್ಣ ಪಾಟೀಲ, ರಜನೀಶ ಕೌಂಟೆ, ಪ್ರಭು, ಆರ್. ಎಸ್. ಪಾಟೀಲ, ಮಹಿಪಾಲ್, ವಿವೇಕ, ಸಂಗಮೇಶ, ಗುರುರಾಜ, ಮುಂತಾದವರು ಇದ್ದರು.