ದುಡ್ಡಿಗಾಗಿ ಸಮಂತಾ ಅರೆಬೆತ್ತಲೆ ನೃತ್ಯ:ಚಿಟ್ಟಿಬಾಬು

ಹೈದರಾಬಾದ್,ಏ.೧೫-ಸ್ಟಾರ್ ನಟಿ ಸಮಂತಾ ಅವರು ಚಿತ್ರರಂಗದಲ್ಲಿ ಯಾರ ಸಹಾಯವಿಲ್ಲದೇ ತನ್ನ ಶ್ರಮದಿಂದ ನೆಲೆಗಿಟ್ಟಿಸಿಕೊಂಡ ಪ್ರತಿಭಾನ್ವಿತ ನಟಿ. ಸದ್ಯ ‘ಶಾಕುಂತಲಂ’ ಚಿತ್ರದ ನಟನೆಗಾಗಿ ಸ್ಯಾಮ್ ಗಮನ ಸೆಳೆಯುತ್ತಿದ್ದಾರೆ. ಚಿತ್ರಕ್ಕೆ ಬರುತ್ತಿರುವ ಕಾಮೆಂಟ್ಸ್‌ನಿಂದಾಗಿ ಖುಷಿಯಲ್ಲಿರುವ ಸಮಂತಾ ಬಗ್ಗೆ ನಿರ್ಮಾಪಕನೊಬ್ಬ ಕಟುವಾಗಿ ಮಾತನಾಡಿದ್ದಾರೆ. ಸಮಂತಾಳದ್ದು ಅಜ್ಜಿ ಮುಖ, ಅವಳ ವೃತ್ತಿ ಜೀವನ ಮುಗಿದಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಅನಾರೋಗ್ಯದ ವಿರುದ್ಧ ನಟಿ ಹೋರಾಡುತ್ತಿದ್ದಾರೆ. ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡ್ತಿದ್ದಾರೆ. ಈ ನಡುವೆ ತೆಲುಗಿನ ನಿರ್ಮಾಪಕ ಚಿಟ್ಟಿಬಾಬು ಸಮಂತಾ ವಿರುದ್ಧ ಮಾತನಾಡಿದ್ದಾರೆ. ‘ಶಾಕುಂತಲಂ’ ಸಿನಿಮಾ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಶಾಕುಂತಲೆ ಅಪ್ರತಿಮ ಸೌಂದರ್ಯವತಿ, ಆದರೆ ಸಮಂತಾಗೆ ಆ ಪಾತ್ರ ಸೂಟ್ ಆಗಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಅದೂ ಇದು ಎಂದು ಹೈಡ್ರಾಮಾ ಮಾಡ್ತಿದ್ದಾರೆ. ಈ ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲಾ ಅವರ ಪ್ರಚಾರ ಗಿಮಿಕ್. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಚಿಟ್ಟಿಬಾಬು ಕಿಡಿಕಾರಿದ್ದಾರೆ. ಸಮಂತಾಗೆ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ.