ದುಡಿಯೋಣ ಬಾ ಯೋಜನೆಯಡಿ ಗ್ರಾಮಸ್ಥರಿಗೆ ಕೆಲಸ ಕೊಡಿ

ಚಿಂಚೋಳಿ,ಏ.7- ತಾಲೂಕ ಪಂಚಾಯತನಲ್ಲಿ ಕರೆದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮತ್ತು ಕಂಪ್ಯೂಟರ್ ಆಪರೇಟರ್ ಗಳ ಸಭೆ ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನೀಲಕುಮಾರ ರಾಠೋಡ ಮಾತನಾಡಿ, ದುಡಿಯೋಣ ಬಾ ಯೋಜನೆ ಅಡಿಯಲ್ಲಿ ಪ್ರತಿ ಒಂದು ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮಸ್ಥರಿಗೆ ಕೆಲಸ ನೀಡಬೇಕು ಎಂದರು.
ಗ್ರಾಮಸ್ಥರಿಗೆ ಕೆಲಸ ನೀಡದಿದ್ದರೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಅಲ್ಲದೇ ವಿವಿಧ ಯೋಜನೆಗಳಲ್ಲಿ ಕಾಮಗಾರಿಗಳು ಯಾವುದೇ ರೀತಿ ಬೋಕಸ್ ಮಾಡಬಾರದು ಹಾಗೂ ಕಳಪೆ ಕಾಮಗಾರಿ ಆಗದಂತೆ ನಿಗವಹಿಸಬೇಕು ಎಂದರು.,
ಕಾಮಗಾರಿಗಳ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಬೇಕು ಆನಂತರವೇ ಬಿಲ್ ಮಾಡಬೇಕೆಂದು ಎಂದು ಹೇಳಿದರು ಈ ಸಂದರ್ಭದಲ್ಲಿ ಚಿಂಚೋಳಿಯ ತಾಲೂಕ ಪಂಚಾಯತ ಯೋಜನೆ ಅಧಿಕಾರಿಗಳಾದ ಶಂಕರ ರಾಠೋಡ. ಮತ್ತು ಎರಡು ತಾಲೂಕಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಕಂಪ್ಯೂಟರ ಆಪರೇಟರಗಳು ಮತ್ತು ತಾಲೂಕ ಪಂಚಾಯತ ಸಿಬ್ಬಂದಿಗಳು ಭಾಗವಹಿಸಿದ್ದರು.