ದುಡಿಯುವ ವರ್ಗ ಹಸಿವಿನಿಂದ ಬಳಲಬಾರದು : ಸವದಿ

ಅಥಣಿ, ಮೇ29 : ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಬಡ ಜನರಿಗೆ ದವಸಧಾನ್ಯಗಳ ಕಿಟ್ ವಿತರಿಸುವ ಮೂಲಕ ಕ್ಷೇತ್ರದ ಜನರ ಸಹಾಯಕ್ಕೆ ಮುಂದಾದ ಡಿಸಿಎಂ, ಲಕ್ಷ್ಮಣ ಸವದಿ ಅವರ ಈ ಕಾರ್ಯಕ್ಕೆ ಅಥಣಿ ತಾಲೂಕಿನ ಸಾರ್ವಜನಿಕರಿಂದ ಅಷ್ಟೇ ಅಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಕೂಡಾ ಮೆಚ್ಚುಗೆ ವ್ಯಕ್ತವಾಗಿದೆ.
ಡಿಸಿಎಂ ಸವದಿ ಅವರ ತಂದೆತಾಯಿಯವರ ಸವಿನೆನಪಿಗಾಗಿ ನೋಂದಾಯಿಸಿದ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ವತಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಅವರ ಕುಟುಂಬ ಸದಸ್ಯರು ಮತ್ತು ಸ್ವಯಂ ಸೇವಕರು ಒಟ್ಟು 65 ಸಾವಿರ ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು 7 ಕಿಲೋ ಗೋಧಿ, 1ಕಿಲೋ ಬೇಳೆ, 1ಕಿಲೋ ಸಕ್ಕರೆ, 1 ಕಿಲೋ ಅವಲಕ್ಕಿ, 1 ಕಿಲೋ ತೊಗರಿಬೇಳೆ, 1 ಕಿಲೋ ಕಡಲೆಬೇಳೆ, 1ಕಿಲೋ ಬೆಲ್ಲ, 250 ಗ್ರಾಂ ಟೀ ಪೌಡರ್, 100 ಗ್ರಾಂ ಸಾಂಬರ್ ಪದಾರ್ಥ, 100 ಗ್ರಾಂ ಖಾರ, 180 ಗ್ರಾಂ ತೂಕದ 2 ಬಿಸ್ಕೆಟ್ ಪ್ಯಾಕೆಟ್ ಹಾಗೂ 1 ಕಿಲೋ ರವೆ ಸೇರಿದಂತೆ ರೇಷನ್ ಕಿಟ್ ವಿತರಣೆ ಮಾಡುತ್ತಿದ್ದಾರೆ.
ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಅಣ್ಣನ ಸುಪುತ್ರ ಹಾಗೂ ಮಿಲೆನಿಯಮ್ ಸ್ಟಾರ್ಚ್ ಕಂಪನಿಯ ನಿರ್ದೇಶಕ ಶಿವಕುಮಾರ ಸವದಿ ಮಾತನಾಡಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮ ಕ್ಷೇತ್ರದ ನಿರ್ಗತಿಕರು, ಬಡವರು, ಹಾಗೂ ಬಡ ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರ ಅನುಕೂಲಕ್ಕಾಗಿ ಧವಸ ಧಾನ್ಯ ಹಂಚುತ್ತಿದ್ದಾರೆ.ಜನರು ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಅವರ ಸೂಚನೆ ಹಾಗೂ ಗುರು ಹಿರಿಯರ ಮಾರ್ಗದರ್ಶನದ ಮೇರೆಗೆ ಅವರ ಕುಟುಂಬದವರಾದ ನಾವು ಮತ್ತು ಸ್ವಯಂ ಸೇವಕರು ಪ್ರತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿದ್ದು. ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ದಿ, 07 ರ ವರೆಗೆ ಲಾಕ್ ಡೌನ್ ಮುಂದುವರಿಸಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಸಿವಿನಿಂದ ಯಾರು ಸಹ ಉಪವಾಸ ಮಲಗಬಾರದು ಅನ್ನುವ ಉದ್ದೇಶದಿಂದ ಅಥಣಿ ತಾಲೂಕಿನಾದ್ಯಂತ ಇರುವ ಬಡ ಜನರಿಗೆ ಆಹಾರ ದಾನ್ಯಗಳನ್ನು ವಿತರಣೆ ಮಾಡುತ್ತಿರುವದಾಗಿ ಹೇಳಿದರು.
ಈ ಸಂಧರ್ಬದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸುಪುತ್ರರಾದ ಚಿದಾನಂದ ಸವದಿ, ಶಶಿಕಾಂತ ಸವದಿ, ಸುಮಿತ್ ಸವದಿ, ಮುಖಂಡರಾದ ರಾಜು ಬುಲಬುಲೆ, ಸುಶೀಲಕುಮಾರ ಪತ್ತಾರ, ಎ ಎಮ್ ಖೊಬ್ರಿ, ಸಂತೋಷ ಸಾವಡಕರ, ರಾಮನಗೌಡಾ ಪಾಟೀಲ, ಅಜೀತ್ ಪವಾರ, ಅರುಣ ಬಾಸಿಂಗಿ, ಶ್ರೀ ಶೈಲ ನಾಯಿಕ, ಚಂದ್ರಕಾಂತ ತೇರದಾಳ, ಮಲ್ಲೇಶ್ ಹುದ್ದಾರ, ಫೈಸಲ್ ಮೋಮಿನ್, ವಿಕಾಸ ತಾಂಬಟ ಪ್ರದೀಪ ನಂದಗಾಂವ, ಆಶೀಪ ತಾಂಬೋಳಿ, ಶ್ರೀ ಶೈಲ ಲೋಣಾರೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು