ದುಡಿಮೆಯ ಸ್ವಲ್ಪ ಭಾಗ ಸಮಾಜಮುಖಿ ಕೆಲಸ ಕಾರ್ಯಗಳಿಗೆ  ನೀಡಬೇಕು

ಸಂಜೆವಾಣಿ ವಾರ್ತೆ

 ಹಿರಿಯೂರು : ಫೆ.28-  ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ವಿದ್ಯಾಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯೂರಿನ ವಾಗ್ದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ವಿ ಅಮರೇಶ್ ರವರಿಗೆ ವಿದ್ಯಾಸಂಸ್ಥೆಯ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಿ ಅಮರೇಶ್ ರವರು ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜಮುಖಿ ಕೆಲಸ ಕಾರ್ಯಗಳಿಗೆ  ನೀಡಬೇಕು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು. ಆರ್ಯವೈಶ್ಯ ಮಹಾಸಭಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಇದರಲ್ಲಿ 93 ವಿದ್ಯಾಸಂಸ್ಥೆಗಳು ಇದ್ದು ಎಲ್ಲ ಸಂಸ್ಥೆಗಳನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಆಶಯ ಇರುವುದಾಗಿ ತಿಳಿಸಿದರು. ಅಗತ್ಯ ಇರುವಂತವರು ಮಹಾಸಭಾ ವತಿಯಿಂದ ನೀಡಬಹುದಾದ ಸಹಕಾರ ಪಡೆಯುವಂತೆ ತಿಳಿಸಿದರುಸಂಸ್ಥೆಯ ಗೌರವ ಅಧ್ಯಕ್ಷರಾದ ಟಿ ಎಸ್ ಕೃಷ್ಣಮೂರ್ತಿ, ಶೈಕ್ಷಣಿಕ ಕಾರ್ಯದರ್ಶಿ ಆರ್ ಪ್ರಕಾಶ್ ಕುಮಾರ್ ಕಾರ್ಯದರ್ಶಿ ಕೆ.ಜಿ ಶ್ರೀಧರ್ ಆರ್ಯವೈಶ್ಯ  ಮಂಡಳಿ ಅಧ್ಯಕ್ಷರಾದ ಎಚ್.ಎಸ್ ನಾಗರಾಜ್ ಗುಪ್ತ    ಆರ್ಯವೈಶ್ಯ ಯುವಜನ ಸಂಘದ ಅಧ್ಯಕ್ಷರಾದ ವಿ. ಜಗದೀಶ್ ನಿರ್ದೇಶಕರಾದ ಜಗನ್ನಾಥ್ ಗುಪ್ತ ಮತ್ತರರು ಕೆ.ವಿ ಅಮರೇಶ್ ರವರ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿದರು. ಮುಖ್ಯ ಶಿಕ್ಷಕರಾದ ಎಚ್ ಸಿ ಶರಣಪ್ಪ ಆರ್ಯವೈಶ್ಯ ಯುವಜನ ಸಂಘದ ಕಾರ್ಯದರ್ಶಿ ರಾಜೇಶ್ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಶಿಕ್ಷಕರಾದ ಜಯಂತಿ ಪ್ರಾರ್ಥಿಸಿದರು ರುಕ್ಮಿಣಿ ನಿರೂಪಿಸಿದರು ಮಂಜುನಾಥ್ ಸ್ವಾಗತಿಸಿ ವಂದಿಸಿದರು