ತಾಳಿಕೋಟೆ:ಜೂ.7: ಪರಮಾತ್ಮನಲ್ಲಿ ನಂಬಿಕೆ ಇಡದಿದ್ದರೆ ಭಕ್ತನಾದವನು ಅಪೂರ್ಣವಾಗುತ್ತಾನೆ ಕೇಳಿ ಇಸಿದುಕೊಂಡು ತಿನ್ನುವದು ಸಹ ಶಾಸ್ತ್ರಕ್ಕೆ ವಿರೋಧವಾಗಿದೆ ಏಕೆಂದರೆ ಭಕ್ತನ ಶ್ರದ್ದೆ ಮತ್ತು ವಿಸ್ವಾಸ ನಿಜವಾಗಿದ್ದರೆ ಪರಮಾತ್ಮನೇ ಎಲ್ಲವನ್ನು ಕೊಡುತ್ತಾನೆಂದು ಬ.ಬಾಗೇವಾಡಿಯ ಕೃಷಿ ಅಧಿಕಾರಿ ಅರವಿಂದ ಹೂಗಾರ ಅವರು ನುಡಿದರು.
ಮಂಗಳವಾರರಂದು ಸ್ಥಳೀಯ ಎಸ್.ಕೆ.ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಇತ್ತಿಚಗೆ ಸೇವಾ ನಿವೃತ್ತಿ ಹೊಂದಿದ ಆರ್.ಎಲ್.ಕೊಪ್ಪದ ದಂಪತಿಗಳಿಗೆ ಅಧಿಕಾರಿ ಅರವಿಂದ ದಂಪತಿಗಳು ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದ ಅವರು ದುಡಿದು ತಿನ್ನುವದು ಗ್ರಹಸ್ತನ ಕೆಲಸವಾದರೆ ಸತ್ಸಂಗ ನಡೆಸುವದು ಸಾದು ಸಂತರ ಕೆಲಸವೆಂಬಂತೆ ಶ್ರದ್ದೆಯಿಂದ ಕೆಲಸ ಮಾಡಿದರೆ ಅವನಿಗೆ ಬೇಡುವ ಅವಶ್ಯಕತೆ ಇರುವದಿಲ್ಲಾವೆಂಬುದನ್ನು ಅನೇಕ ಮಹಾತ್ಮರು ತಮ್ಮ ಅಮೃತವಾಣಿಯಲ್ಲಿ ನುಡಿದಂತೆ ಶ್ರದ್ದಾ ಭಕ್ತಿಯಿಂದ ಶಾಲಾ ಮಕ್ಕಳಿಗೆ ತನ್ನ ಶಿಕ್ಷಕ ವೃತ್ತಿಯಲ್ಲಿ ವಿವಿಧ ಕ್ರೀಡೆಗಳನ್ನು ಮಕ್ಕಳಿಗೆ ಕಲಿಸಿ ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ಕೊಂಡೊಯ್ದಿದ್ದರ ಕೀರ್ತಿ ನಿವೃತ್ತ ಶಿಕ್ಷಕರಾದ ಆರ್.ಎಲ್.ಕೊಪ್ಪದ ಅವರಿಗೆ ಸಲ್ಲುತ್ತದೆ ಎಂದರು.ಅವರ ತರಬೇತಿಯಲ್ಲಿ ಕಲಿತ ಟೆನಿಕ್ವಾಯಿಟ್ ಕ್ರೀಡೆ, ವ್ಹಾಲಿಬಾಲ ಕ್ರೀಡೆ, ಕಬಡ್ಡಿ ಕ್ರೀಡೆ ಇಂತಹ ಅನೇಕ ಕ್ರೀಡೆಯೊಳಗೊಂಡು ಸುಮಾರು ಎಸ್.ಕೆ.ಪ್ರೌಢ ಶಾಲೆಯಲ್ಲಿ 20 ವರ್ಷಗಳಲ್ಲಿ ಅಸಂಖ್ಯಾತ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿ ಆ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿದ್ದಲ್ಲದೇ ಅವರ ಆರೋಗ್ಯವನ್ನೂ ಸಹ ಸದೃಢಗೊಳಿಸಿಕೊಳ್ಳಲು ಅನುವು ಮಾಡಿಕೊಟ್ಟಿರುವ ಕೊಪ್ಪದ ಅವರ ನಿವೃತ್ತಿ ಹೊಂದಿರುವದಕ್ಕೆ ಅನೇಕ ವಿದ್ಯಾರ್ಥಿಗಳು ತಮ್ಮ ಈ ಹಿಂದಿನ ಅವರಿಂದ ಕಲಿತ ಸ್ಪೂರ್ತಿ ನೀಡಿದಂತಹ ಮಾತುಗಳನ್ನೂ ಸಹ ಆಡುತ್ತಾ ಸಾಗಿರುವದನ್ನು ನೋಡಿದರೆ ಕೊಪ್ಪದ ಅವರ ಪ್ರೀತಿ ಪ್ರೇಮ ವಿದ್ಯಾರ್ಥಿಗಳ ಮೇಲೆ ಹೇಗಿತ್ತೆಂಬುದು ಗೊತ್ತಾಗುತ್ತದೆ ಎಂದು ಕೊಪ್ಪದ ಅವರ ಕುರಿತು ಗುಣಗಾನ ಮಾಡಿದರು.
ಇನ್ನೋರ್ವ ಭೋಗೇಶ್ವರ ಕಂಪನಿಯ ಮಾಲಿಕರಾದ ಭೋಗಣ್ಣ ಹೂಗಾರ ಅವರು ಮಾತನಾಡಿ ನಿವೃತ್ತಿ ಜೀವನವೆಂಬುದು ಸರ್ಕಾರಿ ಅರೇ ಸರ್ಕಾರಿ ನೌಕರರಿಗೆ ಸ್ವಾಭಾವಿಕವಾಗಿ ವಯೋಮಾನತಕ್ಕಂತೆ ಬರುವಂತಹದ್ದಾಗಿದೆ ಆ ನಿವೃತ್ತಿ ಜೀವನದಲ್ಲಿಯೂ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಲು ಸಮಾಜ ಸೇವೆಯನ್ನು ಮಾಡಲು ಮುಂದಾದರೆ ಅದರಲ್ಲಿಯೂ ಸಹ ಇನ್ನೂ ಕೀರ್ತಿ ಬೆಳಗಿಸಿಕೊಳ್ಳಬಹುದಾಗಿದೆ ಕಾರಣ ಕೊಪ್ಪದ ಅವರ ನಿವೃತ್ತಿ ದೊರಕಿದೆ ಎಂಬುದು ಅಸಮಾದಾನ ಗೊಳ್ಳುವದು ಬೇಡಾ ಇನ್ನೂ ಸ್ಪೂರ್ತಿದಾಯಕವಾದ ಆರೋಗ್ಯವಿದೆ ತಾವೇ ಒಂದು ಕೇವಲ ಕ್ರೀಡಾ ತರಬೇತಿ ಶಾಲೆಯೊಂದನ್ನು ತೆಗೆದು ಅಥವಾ ವ್ಯಾಯಮ ಶಾಲೆಯೊಂದನ್ನು ತೆಗೆದು ವಿಧ್ಯಾರ್ಥಿಗಳಿಗಾಗಲಿ, ಯುವಕರಿಗಾಗಲಿ ಸ್ಪೂರ್ತಿ ನೀಡುವ ಕಾರ್ಯ ಮಾಡಿದರೆ ನಮ್ಮ ಭಾಗದಲ್ಲಿ ಕ್ರೀಡಾಪಟುಗಳು ಹೆಚ್ಚಾಗುವದರಲ್ಲಿ ಯಾವ ಸಂಶಯವಿಲ್ಲಾವೆಂದರು.
ಈ ಸಮಯದಲ್ಲಿ ಕುಷ್ಟಗಿ ತಹಶಿಲ್ದಾರರಾದ ಕುಮಾರಿ ವಿನಯಾ ಅರವಿಂದ ಹೂಗಾರ, ಶಾರದಾಬಾಯಿ ಹೂಗಾರ, ಅಣ್ಣುಗೌಡ ಯರನಾಳ, ಶಕುಂತಲಾ ಕೊಪ್ಪದ, ಮಲ್ಲಿಕಾರ್ಜುನ ಢವಳಗಿ, ಶಾಂತಗೌಡ ಪಾಟೀಲ, ವಿರೇಶ ಗಂಗನಗೌಡರ, ಮೊದಲಾದವರು ಉಪಸ್ಥಿತರಿದ್ದರು.