ದೀರ್ಘಾವಧಿಯ ನೆರವಿನ ಪ್ರಸ್ತಾಪಕ್ಕೆ ಉಕ್ರೇನ್ ಬೆಂಬಲ

ಬ್ರಸೆಲ್ಸ್, ಎ.೫- ರಷ್ಯಾ ದಾಳಿಗೆ ಒಳಗಾಗುತ್ತಿರುವ ಉಕ್ರೇನ್‌ಗೆ ದೀರ್ಘಾವಧಿಯ ನೆರವು ನೀಡುವ ಬಗೆಗಿನ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿಕೆಗೆ ಉಕ್ರೇನ್ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕಡ್ಡಾಯ ಕೊಡುಗೆಯ ವಿಚಾರವಿಲ್ಲದಿದ್ದರೆ ಇದು ಇದು ಫಲಪ್ರದವಾಗಲು ಸಾಧ್ಯವಿಲ್ಲ ಎಂದು ಕೂಡ ಉಕ್ರೇನ್ ತಿಳಿಸಿದೆ.
ಉಕ್ರೇನ್‌ಗೆ ಬೆಂಬಲ ನೀಡುವ ಸಲುವಾಗಿ ಸುಮಾರು ೧೦೭ ಶತಕೋಟಿ ಡಾಲರ್ ಮೊತ್ತದ ಐದು ವರ್ಷಗಳ ನೆರವಿನ ನಿಧಿ ರಚಿಸುವ ನಿಟ್ಟಿನಲ್ಲಿ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ವಿಚಾರ ಪ್ರಸ್ತಾಪಿಸಿದ್ದರು. ಆದರೆ ಈ ಯೋಜನೆಗೆ ನ್ಯಾಟೋ ಪಡೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ, ನ್ಯಾಟೋ ಮೈತ್ರಿಕೂಟವು ಹೆಚ್ಚು ಸಣ್ಣ ಸಂಖ್ಯೆಯ ಮಿಲಿಟರಿ ಸಹಾಯವನ್ನು ನೀಡುವಲ್ಲಿ ತೊಂದರೆ ಅನುಭವಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಸ್ತುತ ನಿಧಿಯ ಮಾದರಿಯಲ್ಲಿ, ಈ ಉಪಕ್ರಮವು ಶೂನ್ಯ ಅವಕಾಶಗಳನ್ನು ಹೊಂದಿದೆ. ಏಕೆಂದರೆ ನ್ಯಾಟೋ ಪಡೆ ಸದ್ಯ ೫೦೦ ಮಿಲಿಯನ್ ಡಾಲರ್ ಸಂಗ್ರಹಿಸಲು ಸಾಧ್ಯವಿಲ್ಲ. ಈ ರೀತಿ ನ್ಯಾಟೋ ಪಡೆ ಪ್ರಸ್ತುತ ವರ್ಷದಲ್ಲಿ ೨೦ ಶತಕೋಟಿ ಸಂಗ್ರಹಿಸಬೇಕಾಗುತ್ತದೆ. ಆದರೆ ನ್ಯಾಟೋ ಪಡೆಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಕೊಡುಗೆ ನೀಡುವ ನಿಯಮ ಹೊಂದಿದ್ದರೆ ಯೋಜನೆ ಅಸ್ತಿತ್ವದಲ್ಲಿರಬಹುದು ಮತ್ತು ಕಾರ್ಯಗತಗೊಳ್ಳುವ ಅವಕಾಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.