ದೀಪ ಬೆಳಗಿಸಿ ದೀಪಾವಳಿ ಆಚರಿಸಿ

ಆನೇಕಲ್, ನ.೧೫-ಪಟಾಕಿ ಹಚ್ಚುವುದು ನಿಲ್ಲಿಸಿ ಮಣ್ಣಿನ ದೀಪವನ್ನು ಬೆಳಗಿಸಿ, ಪಟಾಕಿ ನಿಷೇದಿಸಿ ಪರಿಸರ ಮಾಲಿನ್ಯ ತಡೆಗಟ್ಟಿ ಎಂಬ ವಾಕ್ಯದೊಂದಿಗೆ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ದೀಪಾವಳಿ ಹಬ್ಬದಲ್ಲಿ ಸಾರ್ವಜನಿಕರು ಪಟಾಕಿ ಒಡೆಯದೆ ಮಣ್ಣಿನ ದೀಪಗಳನ್ನು ಬೆಳಗಿಸಿ ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ದೀಪಗಳನ್ನು ನೀಡುವ ಮುಖೇನ ಸಾರ್ವಜನಿಕರಲ್ಲಿ ಪಟಾಕಿಯಿಂದ ಆಗುವ ತೊಂದರೆಗಳ ಬಗ್ಗೆ ಜನ ಜಾಗೃತಿ ಮೂಡಿಸಿದ ಹೆಬ್ಬಗೋಡಿ ಯುವ ಕಾಂಗ್ರೆಸ್ ಪದಾದಿಕಾರಿಗಳು.
ಹೆಬ್ಬಗೋಡಿ ನಗರಸಭಾ ಸದಸ್ಯರಾದ ಮುನಿಕೃಷ್ಣ, ಮಂಜುನಾಥ್ ರೆಡ್ಡಿ, ನಾರಾಯಣಸ್ವಾಮಿ, ಹೆಚ್.ಸಿ.ವೆಂಕಟೇಶ್, ಶ್ರೀರಾಮರೆಡ್ಡಿ, ಜಿಮ್.ನಾಗರಾಜ್, ಹೆಬ್ಬಗೋಡಿ ಯುವ ಕಾಂಗ್ರೆಸ್ ಪದಾದಿಕಾರಿಗಳಾದ ಕಬ್ಬಡ್ಡಿ ಮಂಜು, ಅರುಣ್ ಕುಮಾರ್, ದೀಪು, ಗಿರೀಶ್, ಜಿಮ್ ಗೋಪಿ, ಹರೀಶ್ ರೆಡ್ಡಿ, ಪ್ರಕಾಶ್, ಡಾ.ಮುರಳಿ, ದನುಷ್, ಪ್ರದೀಪ್, ಗಿರಿ, ಮುರಳಿ, ಅಬಿಷೇಕ್, ರಘುನಂದನ್, ಹೇಮಂತ್, ವಿನಿತ್, ನವೀನ್ ಮತ್ತಿತರು ಇದ್ದರು.