ದೀಪ ಬೆಳಗಲು ಅಗತ್ಯ ಇರುವಷ್ಟೆ ಎಣ್ಣೆ ಹಾಕಬೇಕು: ಸುತ್ತೂರು ಶ್ರೀ

ಹನೂರು. ಫೆ.25:- ದೀಪ ಬೆಳಗಲು ಅಗತ್ಯ ಇರುವಷ್ಟೇ ಎಣ್ಣೆ ಹಾಕಬೇಕು. ಹಾಗೆಯೆ ಸಮಾಜದ ಉನ್ನತಿಗೆ ಅಗತ್ಯ ಸೇವೆಗಳು ಮುಖ್ಯವಾಗಿದ್ದು ಪೆÇೀಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಬೇಕು. ಎಂದು ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಒಡೆಯರಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠ ಸಭಾ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಠ ಮಾನ್ಯಗಳು ಮತ್ತು ದೇವಸ್ಥಾನಗಳು ಮನುಷ್ಯನ ಒಳ್ಳೆಯ ಕಾರ್ಯಗಳಿಗೆ ಬಳಕೆಯಾಗುವ ನಿಟ್ಟಿನಲ್ಲಿ ಸಮಸ್ಯೆಗಳ ಪರಿಹಾರ ಕೇಂದ್ರಗಳಾಗಿರಬೇಕು.
ಸಭಾ ಭವನಗಳನ್ನು ಮದುವೆ ಕಾರ್ಯಗಳ ಜೊತೆಗೆ ಧಾರ್ಮಿಕ ಕಾರ್ಯಗಳಿಗೂ ಬಳಸಿಕೊಂಡು ಸಾರ್ಥಕತೆ ಮೆರೆಯಬೇಕು. ಈ ಭಾಗದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ನಿಶಾಂತ್ ಉತ್ತಮ ಸೇವೆ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಮಲೆಯ ಸೀಮೆಯ ಪ್ರಾಂತ್ಯವಾಗಿರುವ ಈ ಕ್ಷೇತ್ರವು ಜಾತಿ ಧರ್ಮಗಳ ಭಾವೈಕ್ಯತೆ ಹೊಂದಿದ್ದು ಧಾರ್ಮಿಕ ಭಕ್ತಿಯಲ್ಲಿ ಶ್ರೀಮಂತಿಕೆ ಹೊಂದಿರುವ ಪುಣ್ಯ ಸ್ಥಳ.
ಒಡೆಯರಪಾಳ್ಯ ಗ್ರಾಮವು ಧಾರ್ಮಿಕ ಪರಂಪರೆಯ ಅಸ್ಥಿತ್ವಕ್ಕೆ ನಮ್ಮೆಲ್ಲರ ಜವಾಬ್ದಾರಿ ಮುಖ್ಯವಾಗಿದ್ದು ಕಾಯಕವೇ ಕೈಲಾಸ ಎನ್ನುವ ಬಸವಣ್ಣ ತತ್ವದ ಅನುಯಾಯಿಗಳು ಈ ಭಾಗದವರಾಗಿದ್ದು ಅಭಿಮಾನದ ಜನರು ಇರುವ ಕಡೆ ನಮ್ಮ ಸೇವೆ ಸಲ್ಲಬೇಕು.
ಈ ಭಾಗದ ಜನರಲ್ಲಿ ಕಾಯಕ ಮತ್ತು ದಾಸೋಹ ಕಲ್ಪನೆ ಶಾಶ್ವತವಾಗಿದೆ. ಎಂದರಲ್ಲದೆ ನಮ್ಮ ಮೂಲಭೂತ ಸೌಕರ್ಯ ಪಡೆಯುವುದು ನಮ್ಮ ಹಕ್ಕು ಅದನ್ನು ಕೇಳಿ ಪಡೆದು ಕೊಳ್ಳಬೇಕು. ನಮ್ಮ ಮೇಲೆ ಇಷ್ಟೊಂದು ಅಭಿಮಾನ ಪೂರ್ವಕ ಹೊಂದಿರುವ ನಿಮ್ಮೆಲ್ಲರಿಗೂ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವನೂರು ದಾಸೋಹ ಮಠದ ಶ್ರೀ ಮಹಾಂತ ಸ್ವಾಮಿಗಳು, ಮೈಸೂರು ಕುದೇರು ಮಠ ಶ್ರೀ ಗುರುಶಾಂತ ಸ್ವಾಮಿಗಳು, ಕುಂದೂರು ಮಠ ಶ್ರೀಶರತ್ ಚಂದ್ರ ಸ್ವಾಮಿಗಳು, ಸಮಾಜ ಸೇವಕ ನಿಶಾಂತ್, ಮುಖಂಡರಾದ ಗೌಡ್ರು ಸೋಮ ಶೇಖರ್, ಮಹದೇವಸ್ವಾಮಿ, ಸಿದ್ದಲಿಂಗಸ್ವಾಮಿ, ಶಾಂತಮಲ್ಲಪ್ಪ, ಜಡೇರುದ್ರಸ್ವಾಮಿ, ಬಸವರಾಜು ಸೇರಿದಂತೆ ಇನ್ನಿತರರು ಇದ್ದರು.