ದೀಪ ಪ್ರಜ್ವಲನೆಯು ಕೂಡ ಒಂದು ಯಜ್ಞ

ಕಲಬುರಗಿ:ನ.13:ಕಾರ್ತಿಕ ಮಾಸದಲ್ಲಿ ದೀಪ ಪ್ರಜ್ವಲನೆಯಿಂದ ನಾವು ಮಾಡಿರುವ ಸಣ್ಣ ಪುಟ್ಟ ಲೋಪದೋಷಗಳು ವಿಮೋಚನೆಯಾಗುತ್ತದೆ, ದೀಪ ಪ್ರಜ್ವಲನೆ ಜ್ಞಾನ ತಂದುಕೊಡುತ್ತದೆ, ಜ್ಞಾನದಿಂದ ಭಕ್ತಿ, ಶ್ರೇಯಸ್ಸು ಮತ್ತು ವೈರಾಗ್ಯದಿಂದ ಮೋಕ್ಷ ಸಾಧನೆಗೆ ನಾವು ಅರ್ಹರಾಗುತ್ತೇವೆ, ನಾವೆಲ್ಲರೂ ಜಪ ತಪ ಅನುಷ್ಠಾನದಿಂದ ಅಧಿಕಸ್ಯ ಅಧಿಕ ಫಲಮ್ ಎನ್ನುವಂತೆ ಶ್ರೀ ವಿಠಲಕೃಷ್ಣನ ಆರಾಧನೆಯಿಂದ ಅಧಿಕ ಶಾಂತಿ ಸಂತೋಷ ನೆಮ್ಮದಿಯೊಂದಿಗೆ ಉತ್ತರೋತ್ತರ ಅಭಿವೃತ್ತಿಯಾಗುತ್ತದೆ. ಭಕ್ತರೆಲ್ಲರೂ ಮಠಾತಿತವಾಗಿ ಒಂದಾಗಬೇಕು, ನಾವೆಲ್ಲರೂ ಮಠಾಭಿಮುಖಿಗಳಾಗಬೇಕು ಮಕ್ಕಳನ್ನು ಮಠಕ್ಕೆ ಕರೆದುಕೊಂಡು ಬಂದು ಯತಿಪರಂಪರೆ, ಯತಿಗಳ ಮಹಿಮೆ, ಪವಾಡಗಳು, ನಮ್ಮ ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಶ್ರೀಮತ್ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಆಶೀರ್ವಚನ ನೀಡಿದರು.

ಕಾರ್ತಿಕ ಮಾಸದ ಪ್ರಯುಕ್ತ ಸುರಪುರ ತಾಲೂಕಿನ ಹುಣಸಿಹೊಳೆಯ ಶ್ರೀಮತ್ ಕಣ್ವಮಠದಲ್ಲಿ ಕಾರ್ತಿಕ ದೀಪೆÇೀತ್ಸವ ಹಮ್ಮಿಕೊಳ್ಳಲಾಗಿತ್ತು. ಸಾಯಂಕಾಲ ವೇದಮೂರ್ತಿಗಳಾದ ಶ್ರೀ ವಿಷ್ಣುಪ್ರಕಾಶ್ ಜೋಶಿ, ಶ್ರೀ ಜಗನ್ನಾಥಾಚಾರ್ ಜೋಶಿ, ಶ್ರೀ ಶಂಕರಭಟ್ ಜೋಶಿ ಮತ್ತು ಶ್ರೀ ಮಾರುತಿ ಬೈಚಬಾಳ ವೈದಿಕ ವೃಂದದ ನೇತೃತ್ವದಲ್ಲಿ ಕಾರ್ತಿಕ ದೀಪೆÇೀತ್ಸವದ ಸಂಕಲ್ಪ, ಗಣಪತಿ ಪೂಜೆ, ವರುಣ ಪೂಜೆ, ಕಲಶ ಪೂಜೆ ನಡೆಯಿತು ನಂತರ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು ದೀಪ ಪ್ರಜ್ವಲನೆ, ಮಂಗಳಾರತಿಯೊಂದಿಗೆ ಕಾರ್ತಿಕ ದೀಪೆÇೀತ್ಸವಕ್ಕೆ ಚಾಲನೆ ನೀಡಿದರು.

ಪ್ರವಚನ ನೀಡಿದ ಪಂಡಿತ್ ಶ್ರೀ ಅರುಣಕುಮಾರ್ ಜೋಶಿ ರಂಗಂಪೇಟೆ ಸ್ಕಂದ ಪುರಾಣದಲ್ಲಿ ಬರುವ ವೈಷ್ಣವ ಖಂಡದ ಕಾರ್ತೀಕ ಮಾಸ ಮಹತ್ವ, ಕಾರ್ತಿಕ ದಾಮೋದರ, ತುಳಸಿ, ಕಾರ್ತಿಕ ಸ್ನಾನ, ಕಾರ್ತಿಕ ಮಾಸದಲ್ಲಿ ದೀಪ ದಾನ ಮಾಡಬೇಕು, ತುಳಸಿ ಮಹಿಮೆಯನ್ನು ಶ್ರವಣ ಮಾಡಬೇಕು, ಅತಿಥಿಗಳನ್ನು ಸತ್ಕರಿಸಬೇಕು, ದೀಪದಲ್ಲಿ ಭಗವಂತನನ್ನು ಕಾಣುವ ಮೂಲಕ ಅಜ್ಞಾನವನ್ನು ನಾಶವಾಗುತ್ತದೆ ಎಂದರು.

ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ ಮಡಿಗೇರಿ ಮಾತನಾಡಿ ಕಾರ್ತಿಕ ದೀಪೆÇೀತ್ಸವವನ್ನು ಅತ್ಯಂತ ಸುವ್ಯವಸ್ಥಿತವಾಗಿ ವೈಭವದಿಂದ ಮತ್ತು ಭಕ್ತರ ಸಹಕಾರದಿಂದ ಯಶಸ್ವಿಗೊಳಿಸಲು ಶ್ರಮಿಸಿದ ಟ್ರಸ್ಟಿನ ರಾಘವೇಂದ್ರ ಗೆದ್ದಲಮರಿ, ರಾಜು ಜೋಷಿ, ಪುರುಷೋತ್ತಮ ಕುಲಕರ್ಣಿ, ಭೀಮಸೇನ್ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ವಿನುತ ಎಸ್ ಜೋಶಿ ಅವರಿಗೆ ಧನ್ಯವಾದಗಳು ತಿಳಿಸಿ, ಮುಂಬರುವ ದಿನಗಳಲ್ಲಿ ವೇದಮೂರ್ತಿಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ವೇದಪಾರಾಯಣ, ವಾರಪಯರ್ಂತವಾಗಿ ಜ್ಞಾನ ಸತ್ರಗಳನ್ನು, ಬೇಸಿಗೆಯಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು, ಶ್ರೀಮಠದಲ್ಲಿನ ಗೋ ಶಾಲೆಯಲ್ಲಿ ಗೋವುಗಳನ್ನು ಸಂಖ್ಯೆಯನ್ನು ಹೆಚ್ಚಿಸಲು ದಾನಿಗಳು ಗೋದಾನ ನೀಡಬೇಕು ಎಂದು ಕೋರಿದರು.

ದಿವಾನರಾದ ಸುರೇಶ್ ಕುಲಕರ್ಣಿ, ಕಮಲಾಕರರಾವ್ ದೇಶಪಾಂಡೆ, ಭೀಮಾಚಾರ್ಯ ಜೋಶಿ, ಪಾಪಣ್ಣಾಚಾರ್ಯ ರಂಗಂಪೇಟೆ, ಚಿದಂಬರ ದೇಶಪಾಂಡೆ, ವಿನುತ ಜೋಶಿ, ಮಧುಸೂದನ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಭಜನಾ ಮಂಡಳಿ ಲಿಂಗಸೂರಿನ ಉಮಾ, ಶೈಲಜಾ, ವನಮಾಲ ಕುಲಕರ್ಣಿ, ಶೋಭಾ, ಜೈಶ್ರೀ ಹಾಗೂ ಸುರಪುರದ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ಸುರೇಖಾ, ರಾಜಲಕ್ಷ್ಮಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.