ದೀಪಿಕಾ ಪಡುಕೋಣೆಗೆ ’ಓಂ ಶಾಂತಿ ಓಂ’ ಪ್ರಥಮ ಫಿಲ್ಮ್ ನ ಮರೆಯಲಾಗದ ಪಾಠ.

ನಟಿ ದೀಪಿಕಾ ಪಡುಕೋಣೆಗೆ ೨೦೦೭ರಲ್ಲಿ ಬಿಡುಗಡೆಯಾದ ತನ್ನ ಮೊದಲ ಹಿಂದಿ ಫಿಲ್ಮ್ ’ಓಂ ಶಾಂತಿ ಓಂ’ ಯಾವತ್ತೂ ಮರೆಯಲು ಸಾಧ್ಯ ಇಲ್ಲವಂತೆ.ಆ ಫಿಲ್ಮ್ ರಿಲೀಸ್ ಆಗಿರುವ ದಿನಗಳಲ್ಲಿ ತನಗೆ ಅಪಹಾಸ್ಯ ಮಾಡಿದವರ ಮಾತುಗಳನ್ನು ಸಂದರ್ಶನವೊಂದರಲ್ಲಿ ನೆನಪಿಸಿದ್ದಾರೆ. ಆವಾಗ ಕೆಲವು ಜನರು ದೀಪಿಕಾರನ್ನು ತಮಾಷೆಯಾಗಿ ಸ್ವೀಕರಿಸುತ್ತಾ “ಮಾಡೆಲ್ ಕ್ಷೇತ್ರದವರಿಗೆ ಅಭಿನಯ ಏನು ಗೊತ್ತು?” ಎಂದು ಲೇವಡಿ ಮಾಡಿದ್ದರಂತೆ. ಈಕೆ ಮಾಡೆಲ್ ಕ್ಷೇತ್ರದವಳು, ಅಭಿನಯ ಹೇಗೆ ಗೊತ್ತಿರುತ್ತದೆ…? ಇಂತಹ ಮಾತುಗಳನ್ನು ಕೇಳಿ ನನಗೆ ಬಹಳ ನೋವಾಗುತ್ತಿತ್ತು. ಫಿಲ್ಮ್ ಬಿಡುಗಡೆಯಾದಾಗ ನನಗೆ ೨೧ ವರ್ಷವಷ್ಟೆ. ಇಂಥ ವಯಸ್ಸಿನಲ್ಲಿ ಈ ಮಾತುಗಳು ಬಹಳ ಪ್ರಭಾವ ಬೀರುತ್ತವೆ ಎಂದಿದ್ದಾರೆ.


ಈ ಮಾತಿನ ನಂತರ ದೀಪಿಕಾ ಪಡುಕೋಣೆ ಅಭಿನಯದತ್ತ ಗಂಭೀರವಾಗಿ ಯೋಚನೆ ಮಾಡಿದರಂತೆ.
“ನನ್ನನ್ನು ಯಾರು ಲೇವಡಿ ಮಾಡಿದರೋ ಅದು ನನ್ನನ್ನು ಇನ್ನಷ್ಟು ಶ್ರಮ ಪಡಲು ಪ್ರೇರೇಪಿಸಿತು. ಅಸಫಲತೆ ನನಗೆ ಬಹಳಷ್ಟು ಕಲಿಸಿಕೊಟ್ಟಿತು. ನಾಯಕ ಶಾರುಖ್ ಖಾನ್ ಮತ್ತು ಡೈರೆಕ್ಟರ್ ಫರಾಹ ಖಾನ್ ಶೂಟಿಂಗ್ ಸಂದರ್ಭದಲ್ಲಿ ಉತ್ತಮ ಮಾರ್ಗದರ್ಶನ ನೀಡಿದ್ದರು. ಕೆಲವು ವರ್ಷ ನಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದವಳು. ನಂತರ ಈ ಫಿಲ್ಮ್ ನ ಮೂಲಕ ಬಹಳ ದೊಡ್ಡ ಬ್ರೇಕ್ ಸಿಕ್ಕಿತ್ತು. ಓಂ ಶಾಂತಿ ಓಂ ಫಿಲ್ಮ್ ಗೆ ಕರೆ ಬಂದಾಗ ನನಗೆ ೧೯ ವರ್ಷ. ನಿಜಕ್ಕೂ ಆಗ ನನಗೆ ಅನುಭವಗಳು ಇರಲಿಲ್ಲ. ಆದರೆ ಶಾರುಖ್ ಖಾನ್ ಮತ್ತು ಫರಾಹ ಖಾನ್ ನನ್ನ ಜೊತೆಗಿದ್ದು ಮಾರ್ಗದರ್ಶನ ನೀಡಿದ್ದರು” ಎಂದು ಅವರಿಬ್ಬರನ್ನು ಕೃತಜ್ಞತೆಯಿಂದ ನೆನಪಿಸುತ್ತಾರೆ.

ಓಂ ಶಾಂತಿ ಓಂ ಫಿಲ್ಮ್ ಸಿಕ್ಕಿದ್ದು ಕೂಡ ಒಂದು ಕಥೆ ಇದೆ:
ಫರಾಹ ಖಾನ್ ತಮ್ಮ ಈ ಫಿಲ್ಮ್ ನ ಹೀರೋಯಿನ್ ಗಾಗಿ ಸ್ನೇಹಿತೆ ಮಲೈಕಾ ಅರೋರ ಅವರ ಸಹಾಯ ಕೇಳಿದ್ದರು. ಶಾರುಖ್ ಖಾನ್ ಅಪೋಸಿಟ್ ಹೊಸ ಮಾಡೆಲ್ ಯಾರಾದರೂ ಇದ್ದರೆ ಹೆಸರು ಹೇಳು ಎಂದಿದ್ದರಂತೆ .ಈ ವಿಷಯವನ್ನು ಮಲೈಕಾ ತನ್ನ ಸ್ನೇಹಿತರಾದ ವೆಂಡೆಲ ರೋಡ್ರಿಗ್ಸ್ ಅವರಿಗೆ ಹೇಳಿದರು.
ರೋಡ್ರಿಗ್ಸ್ ಅವರು ಮಾಡೆಲ್ ದೀಪಿಕಾ ಪಡುಕೋಣೆ ಫಿಲ್ಮ್ ನಲ್ಲಿ ಅಭಿನಯಿಸಲು ಇಚ್ಚಿಸುವರು ಎಂದು ಸೂಚಿಸಿದರು. ದೀಪಿಕಾ ಆ ಸಮಯ ವೆಂಡೆಲ ಅವರಿಗಾಗಿ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಕ್ಯಾಟ್ ವಾಕ್ ಮಾಡಿದ್ದರು.
ವೆಂಡೆಲ ರೋಡ್ರಿಗ್ಸ್ ಅವರು ಕೂಡಾ ಒಂದು ಸಂದರ್ಶನದಲ್ಲಿ ಈ ವಿಷಯವಾಗಿ ಮಾತನಾಡುತ್ತಾ “ನಾನು ಲ್ಯಾಕ್ಮೆ ಫ್ಯಾಶನ್ ವೀಕ್ ಗಾಗಿ ಕಲೆಕ್ಷನ್ ಪ್ರದರ್ಶಿಸಿದರೆ, ದೀಪಿಕಾರಿಗೆ ಅದು ಗೇಮ್ ಚೇಂಜರ್ ಎಂದು ಸಾಬೀತಾಯಿತು. ನನ್ನ ಸ್ನೇಹಿತೆ ಮಲೈಕಾ ಅವರು ಶಾರುಖ್ ರ ಹೀರೋಯಿನ್ ಗಾಗಿ ಒಂದು ಹೊಸ ಮುಖವನ್ನು ಕೇಳಿದ್ದರು. ಆ ಸಮಯ ಫಿಲ್ಮ್ ನ ವರ್ಕಿಂಗ್ ಟೈಟಲ್ ಓಂ ಶಾಂತಿ ಓಂ ಇರಲಿಲ್ಲ. ನಾನು ದೀಪಿಕಾರ ಹೆಸರನ್ನು ಶಿಫಾರಸು ಮಾಡಿದೆ. ಮಲೈಕಾರಿಗೆ ದೀಪಿಕಾ ಇಷ್ಟ ಆಯ್ತು. ಅವರು ಫರಾಹ್ ಖಾನ್ ರಿಗೆ ದೀಪಿಕಾರನ್ನು ಶಿಫಾರಸು ಮಾಡಿದರು.

ಇತ್ತ ದೀಪಿಕಾ ಪಡುಕೋಣೆ ನಂಬಿರುವಂತೆ ಓಂ ಶಾಂತಿ ಓಂ ದೊರೆತಿರುವುದು ಅದೃಷ್ಟ ಅಂತೆ. “ನಾನು ಮುಂಬೈ ಗೆ ಬಂದಿದ್ದೆ. ಫರಾಹ ಖಾನ್ ರಿಗೆ ಆಗಿನ ಪ್ರಸಿದ್ಧಿಯ ನಟಿಯರನ್ನು ಕರೆಯಬಹುದಿತ್ತು. ಆದರೆ ಅವರು ಹೊಸಮುಖವನ್ನು ಅಪೇಕ್ಷಿಸಿದ್ದರು. ಅವರು ನನ್ನ ಎಲ್ಲ ಜಾಹೀರಾತು ಫಿಲ್ಮ್ ಗಳನ್ನು ನೋಡಿದ್ದರು .ಹಾಗೂ ಶಾರೂಖ್ ರ ಅಪೋಸಿಟ್ ನನ್ನನ್ನು ಸ್ವೀಕರಿಸುವ ರಿಸ್ಕ್ ನ್ನು ಪಡೆದರು” ಎಂದಿದ್ದಾರೆ .

೧೦೪ ದಿನಗಳ ನಂತರ ಮುಂಬಯಿಗೆ ಬಂದರು ಕಂಗನಾ.

ನಟಿ ಕಂಗನಾ ರಣಾವತ್ ಧೀರ್ಘ ಬ್ರೇಕ್ ನ ನಂತರ ತನ್ನ ಹಿಮಾಚಲದ ಮನೆ ಮನಾಲಿಯಿಂದ ಮುಂಬೈಗೆ ಹಿಂತಿರುಗಿ ಬಂದಿದ್ದಾರೆ. ಕಂಗನಾ ತನ್ನ ಸಹೋದರಿ ರಂಗೋಲಿ ಮತ್ತು ಕಸಿನ್ ಪೃಥ್ವಿರಾಜ್ ಜೊತೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದರು .ಇದರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಈ ಸಂದರ್ಭದಲ್ಲಿ ಕಂಗನಾ ಜೊತೆ ವಿಶೇಷ ಸೆಕ್ಯೂರಿಟಿ ಗಾರ್ಡ್ಸ್ ಗಳು ಉಪಸ್ಥಿತರಿದ್ದರು. ಕಂಗನಾ ೧೦೪ ದಿನಗಳ ನಂತರ ಮುಂಬೈಗೆ ವಾಪಸ್ ಬಂದಿದ್ದಾರೆ.
ಇದಕ್ಕಿಂತ ಮೊದಲು ಶಿವಸೇನೆಯ ವಿವಾದದ ಸಮಯ ಕಂಗನಾ ಸೆಪ್ಟೆಂಬರ್ ೯ರಂದು ಮುಂಬೈಗೆ ಬಂದಿದ್ದರು. ಐದು ದಿನಗಳ ಕಾಲ ಮುಂಬೈಯಲ್ಲಿ ಉಳಿದ ನಂತರ ಸೆಪ್ಟೆಂಬರ್ ೧೪ರಂದು ಮತ್ತೆ ಹಿಮಾಚಲದ ಮನಾಲಿಗೆ ಹಿಂತಿರುಗಿದ್ದರು.


ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕಂಗನಾ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಚರ್ಚೆ ಎಬ್ಬಿಸಿದ್ದರು. ಮುಂಬೈಯನ್ನು ಪಿಓಕೆ ಎಂದು ಕೂಡ ಕಂಗನಾ ಹೇಳಿದ್ದರು. ಅನಂತರ ಶಿವಸೇನೆಯ ನೇತಾ ಸಂಜಯ್ ರಾವುತ್ ಜೊತೆ ವಿವಾದ ಹುಟ್ಟಿ ಕಂಗನಾಗೆ ಬೆದರಿಕೆ ಕೂಡ ಬಂದಿತ್ತು .ಹಾಗೂ ಕೇಂದ್ರ ಸರಕಾರವು ವೈ ಪ್ಲಸ್ ಸೆಕ್ಯೂರಿಟಿ ಅನ್ನು ಅವರಿಗೆ ನಂತರ ನೀಡಿತ್ತು .
ಕಂಗನಾ ಸೆಪ್ಟೆಂಬರ್ ೯ರಂದು ಮುಂಬೈಗೆ ಬಂದಿದ್ದರೆ ಮಹಾನಗರಪಾಲಿಕೆಯು ಅವರ ಪಾಲಿಹಿಲ್ ನಲ್ಲಿರುವ ಆಫೀಸಿನ ಕೆಲವು ಭಾಗ ಕೆಡವಿ ಹಾಕಿತ್ತು.ಆದರೆ ಕೋರ್ಟ್ ನಲ್ಲಿ ತೀರ್ಪು ಕಂಗನಾ ಪರ ಬಂದಿದೆ.