ದೀಪಾ ಅಂಧ ಅಕಾಡೆಮಿ ಶಾಲೆಯಲ್ಲಿ ದೀಪಾವಳಿ ಆಚರಣೆ

ಚಾಮರಾಜನಗರ, ನ.17- ತಾಲ್ಲೂಕಿನ ಬೋಗಾಪುರ ಗ್ರಾಮದ ದೀಪಾ ಅಂಧ ಅಕಾಡೆಮಿ ವಸತಿ ಶಾಲೆಯ 20 ಮಕ್ಕಳಿಗೆ ಹೊದಿಕೆ ಹಾಗೂ ಬ್ಯಾಗ್ ವಿತರಿಸಿ ಸಿಹಿ ಹಂಚುವ ಮೂಲಕ ಇಂದು ದೀಪಾವಳಿ ಹಬ್ಬವನ್ನು ದಾನಿಗಳು ಇಂದು ಅರ್ಥಪೂರ್ಣವಾಗಿ ಆಚರಿಸಿದರು.
ಹೆಬ್ಬಸೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ದಾನಿಗಳಾದ ವಿ.ರಾಜೇಂದ್ರ ಅವರು ಅಂಧ ಶಾಲೆ ಮಕ್ಕಳಿಗೆ ನೀಡಿದ ಹೊದಿಕೆಗಳನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾದ ಎಂ.ರಾಮಚಂದ್ರ ಅವರು ವಿತರಿಸಿದರು.ಈ ವೇಳೆ ಮಾತನಾಡಿದ ಅವರು ದೇಶ,ರಾಜ್ಯ ನನಗೆ ಏನು ಮಾಡಿದೆ ಎಂದು ಚರ್ಚಿಸುವ ಬದಲು ನಮ್ಮ ಮಿತಿಯಲ್ಲಿ ನಮ್ಮಿಂದ ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ನಿವೃತ್ತರಾದ ನಂತರವೂ ರಾಜೇಂದ್ರ ಅವರು ಸಮಾಜಮುಖಿ ಕೆಲಸಗಳ ಮೂಲಕ ಸೇವೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು. ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಅಗತ್ಯವಾಗಿ ಬೇಕಾದಂತಹ ಭೌತಿಕ ಉಪಕರಣಗಳು ಮಕ್ಕಳಿಗೆ ಬೇಕಾದಂತ ಮೂಲಭೂತ ಸೌಕರ್ಯಗಳನ್ನು ದಾನಿಗಳು ಕಲ್ಪಿಸುತ್ತಿರುವುದು ಸಂತಸ ತಂದಿದ್ದು, ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ನುಡಿದರು.ಅಂಧ ಮಕ್ಕಳಲ್ಲಿ ದೇವರನ್ನು ಕಾಣಬಹುದಾಗಿದ್ದು ದೀಪಾವಳಿ ಹಬ್ಬದಂದು ಹಣ ವ್ಯರ್ಥ ಮಾಡುವ ಬದಲು ಇಂತಹ ಉಪಯುಕ್ತ ಕೆಲಸಗಳನ್ನು ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ದಾನಿಗಳಾದ ವಿ.ಅನ್ನಪೂರ್ಣ ಅವರು ಅಂಧ ವಸತಿ ಶಾಲಾ ಮಕ್ಕಳಿಗೆ ನೀಡಲಾದ ಬ್ಯಾಗ್‍ಗಳನ್ನು ಚಾಮರಾಜನಗರ ಪಟ್ಟಣ ಠಾಣೆ ಅಪರಾಧ ವಿಭಾಗದ ಪಿಎಸ್‍ಐ ಎಂ.ಸಿದ್ದರಾಜನಾಯಕ ವಿತರಿಸಿ ಮಾತನಾಡಿ ಸಮಾಜಕ್ಕೆ ನಾವು ಮಾಡಿದ ಸೇವಾ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಕೊರೋನಾ ಸಂದರ್ಭದಲ್ಲಿಸಮಾಜ ಸೇವೆಗಾಗಿ ಮೀಸಲಾಗಿ ಸೇವೆಸಲ್ಲಿಸುತ್ತಿರುವಸಂಸ್ಥೆಗಳಿಗೆ ದಾನಿಗಳು ಸಹಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ದಾನಿಗಳಾದ ವಿ.ರಾಜೇಂದ್ರ ಅವರು ಮಾತನಾಡಿ ಶಿಕ್ಷಕ ವೃತ್ತಿಯ ಸೇವಾವಧಿಯಿಂದಲೂ ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವುದು,ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟುವುದು, ಅಶಕ್ತ ಹಾಗೂ ದುರ್ಬಲ ಕುಟುಂಬಗಳಿಗೆ ಕೊರೊನಾ ಸಂದರ್ಭದಲ್ಲಿ ಆಹಾರಪದಾರ್ಥಗಳ ಕಿಟ್‍ಗಳನ್ನುನೀಡಿದ್ದು, ಸಮಾಜಮುಖಿ ಕೆಲಸಗಳುನಮ್ಮ ಕರ್ತವ್ಯವಾಗಿದೆಸಮಾಜದಿಂದ ಏನಾದರೂಪಡೆದನಾವುಸಮಾಜಕ್ಕೆ ಏನಾದರೂಮಾಡಬೇಕು ಎಂಬುದುನಮ್ಮ ಧ್ಯೇಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ದಾನಿಗಳಾದ ವಿ.ಅನ್ನಪೂರ್ಣ ಮಾತನಾಡಿ ಅಂಧತೆ ಇದ್ದರೂ ಸಾಧನೆ ಮಾಡಿದ ಅನೇಕರು ನಮ್ಮ ಕಣ್ಣ ಮುಂದಿದ್ದು ವಿದ್ಯಾರ್ಥಿಗಳೂ ಉತ್ತಮವಾಗಿ ಶಿಕ್ಷಣ ಪಡೆದು ಸಮಾಜದ ಆಸ್ತಿಗಳಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೀಪಾ ಅಂಧ ಅಕಾಡೆಮಿ ವಸತಿ ಶಾಲೆಯ ಶಿಕ್ಷಕಿ ಸುನಿತಾ ಅವರು ಮಾತನಾಡಿ ಸ್ವಯಂ ಸೇವೆಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆಗೆ ದಾನಿಗಳು ಇಂದು ಬ್ಲಾಂಕೆಟ್ ಹಾಗೂ ಬ್ಯಾಗ್ ವಿತರಿಸಿರುವುದು ಮಕ್ಕಳಿಗೆ ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು.
ಅಂಧ ವಸತಿ ಶಾಲೆಯ ಮಕ್ಕಳಿಗೆ ಜಿ.ಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರ ಅವರು ಶಾಲು ಹೊದಿಸಿ ಸನ್ಮಾನಿಸಿದ್ದು ವಿಶೇ?Àವಾಗಿತ್ತು.ಶಾಲೆಯ ಪ್ರೇಮ ಮತ್ತು ಪವಿತ್ರ ವಿದ್ಯಾರ್ಥಿಗಳು ಶುಶ್ರಾವ್ಯವಾಗಿ ಪ್ರಾರ್ಥನೆ ಹಾಡಿ ರಂಜಿಸಿದರು.
ಅಂಧ ಮಕ್ಕಳೆಲ್ಲಾ ಶಿಸ್ತಾಗಿ ಕೂತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ವೇಣುಗೋಪಾಲ್,ಪಟ್ಟಣ ಠಾಣೆಯ ಪೇದೆ ಶಂಕರ್, ಯುವ ಸಾಹಿತಿ ಕೆ.ಶ್ರೀಧರ್ (ಸಿರಿ), ದಾನಿ ಕಾರ್ತಿಕ್, ಇದ್ದರು.