ದೀಪಾವಳಿ ಹಬ್ಬ: ಗೋಪೂಜೆ ಮತ್ತು ಗೋವರ್ಧನ ಪೂಜೆ

ಮಂಗಳೂರು, ನ.೧೮-ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಇಸ್ಕಾನ್ ವತಿಯಿಂದ ದೀಪಾವಳಿ ಹಬ್ಬವನ್ನು ನ.೧೫ರಂದು ನಗರದ ಸಿ.ವಿ.ನಾಯಕ್ ಹಾಲ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಎಲ್ಲಾ ಭಕ್ತಾಧಿಗಳಿಗೆ ತುಪ್ಪದ ದೀಪವನ್ನು ಶ್ರೀಕೃಷ್ಣ ಬಲರಾಮ ದೇವರಿಗೆ ಸಮರ್ಪಿಸುವ ಭಾಗ್ಯವನ್ನು ಈ ಸಂದರ್ಭದಲ್ಲಿ ಒದಗಿಸಲಾಯಿತು. ದೀಪಾವಳಿ ಹಬ್ಬದ ಆಚರಣೆಯೊಂದಿಗೆ ಗೋಪೂಜೆ ಮತ್ತು ಗೋವರ್ಧನ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೂರು ಕೆ.ಜಿಯ ಕೇಕ್‌ನ್ನು ಕತ್ತರಿಸಿ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಹಂಚಲಾಯಿತು.