ದೀಪಾವಳಿ ಹಬ್ಬದಲ್ಲಿ ಮೈಮರೆಯಬೇಡಿ : ಚರಂತಿಮಠ

ಬಾಗಲಕೋಟೆ,ನ.14 : ದೀಪಾವಳಿ ಹಬ್ಬದಲ್ಲಿ ಮೈ ಮರೆಯಬಾರದು. ಕೋವಿಡ್ ಹಿನ್ನಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಸಾರ್ವಜನಿಕರು ಪಾಲಿಸಬೇಕು ಎಂದು ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠವರು ತಿಳಿಸಿದ್ದಾರೆ.
ದೀಪಾವಳಿ ಹಬ್ಬಕ್ಕಾಗಿ ಮಾರುಕಟ್ಟೆಗೆ ಬರುವ ಗ್ರಾಮೀಣ ಹಾಗೂ ನಗರದ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಅನವಶ್ಯಕವಾಗಿ ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಜನನೀಬೀಡ ಮಾರುಕಟ್ಟೆಗೆ ಕರೆದುಕೊಂಡು ಬರಬಾರದು. ಕೋವಿಡ್ ಹಿನ್ನಲೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬಕ್ಕಾಗಿ ಸರ್ಕಾರ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಿದೆ. ಆದರೆ ಜನ ಸರ್ಕಾರ ತಿಳಿಸಿರುವಂತೆ ಪರಿಸರ ಸ್ನೇಹಿ ಹಾಗೂ ಹಸಿರು ಪಟಾಕಿಯನ್ನು ಸಿಡಿಸಬೇಕು. ಈ ಮೊದಲು ಸಿಡಿಸುವ ಪಟಾಕಿಯಿಂದ ವಿಷಾನೀಲ ಹೆಚ್ಚಾಗುತ್ತಿತ್ತು. ಇದರಿಂದ ಉಸಿರಾಟದ ತೊಂದರೆಯನ್ನು ಸಹ ಜನ ಅನುಭವಿಸುತ್ತಿದ್ದರಿಂದ ಇದನ್ನೆಲ್ಲಾ ದೂರಮಾಡಲೆಂದೇ ಸರ್ಕಾರ ಹಸಿರು ಪಟಾಕಿಯನ್ನು ಸಿಡಿಸಲು ಅನುಮತಿ ನೀಡಿದೆ ಅದನ್ನೇ ಎಲ್ಲರೂ ಕಡ್ಡಾಯವಾಗಿ ಪಾಲಿಸಿಕೊಂಡು ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು. ದೀಪಾವಳಿ ಹಬ್ಬ ಎಲ್ಲರಿಗೂ ಶುಭವನ್ನು ಮಾಡಲಿ ಎಂದು ಹೇಳಿದರು.