ದೀಪಾವಳಿ ಹಬ್ಬಕ್ಕೆ ದುಬಾರಿಯಾದ ಹೂವಿನ ಬೆಲೆ

ಸಿರುಗುಪ್ಪ ನ 15 : ಬೆಳಕಿನ ಹಬ್ಬ ದೀಪಾವಳಿ ಆರಂಭಗೊಂಡಿದ್ದು ಹಬ್ಬದ ಆಚರಣೆಗೆ ಬೇಕಾಗದ ಪೂಜೆ ಸಾಮಾಗ್ರಿಗಳ ಬೆಲೆಯು ಕೊಂಚ ದುಬಾರಿಯಾಗಿದ್ದು, ಹೂವುಗಳ ಬೆಲೆ ಗಗನಕ್ಕೆ ಏರಿದೆ.
ನಗರದ ವಿವಿಧ ಕಡೆಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಬೇಕಾದ ಹೂ, ಹಣ್ಣು, ಬಾಳೆಕಂಬ, ಮಾವಿನ ತೋರಣ, ಕಬ್ಬಿನ ಜಲ್ಲೆ ಮುಂತಾದವುಗಳನ್ನು ಮಾರಾಟಕ್ಕೆ ಇಟ್ಟಿದ್ದು, ಮಲ್ಲಿಗೆ ಒಂದು ಕೆ.ಜಿ.2000ಸಾವಿರ ರೂ, ಚೆಂಡುಹೂವ ಕೆ.ಜಿ 100ರಿಂದ 150 ರೂ, ಸೇವಂತಿಗೆ ಒಂದು ಮಾರು 150 ರೂ, ಗುಲಾಬಿ ಹೂ ಒಂದು ಕೆ.ಜಿ.580ರೂ, ಕನಕಾಂಬರ ಹೂ ಕೆ.ಜಿ.2000ಸಾವಿರ ರೂ, ಮೋಸಂಬಿ ಹಣ್ಣು ಕೆ.ಜಿ.60ರೂ, ಸೇಬು ಕೆ.ಜಿ.120ರೂ, ದಾಳಿಂಬೆ ಕೆ.ಜಿ.80ರೂ, ಸೀತಾಫಲ ಕೆ.ಜಿ.50ರೂ, ದ್ರಾಕ್ಷಿ ಕೆ.ಜಿ.160ರೂ, ಬೆಲ್ಲದಹಣ್ಣು ಒಂದು 10ರೂ, ಬಾಳೆ ಹಣ್ಣು ಒಂದು ಡಜನ್ 30ರೂ, ಸಪೋಟಾ ಕೆ.ಜಿ.50ರೂ, ಪೆರಲಾ ಕೆ.ಜಿ.60ರೂ, ಮಾವಿನ ಎಲೆಯ ಕಟ್ಟು 50ರೂ, ಕಬ್ಬಿನ ಜಲ್ಲೆ ಜೊತೆ 150ರೂ, ಬೂದುಗುಂಬಳೆ ಕಾಯಿ 60ರಿಂದ 150ರೂ, ಬಾಳೆ ಕಂಬ ಜೊತೆ 30ರಿಂದ 150ರೂ.
ಮಲ್ಲಿಗೆ, ಸುಗಂಧಿ, ಚೆಂಡು, ಸೇವಂತಿಗೆ ಹೂವಿನ ಹಾರಗಳು 80ರಿಂದ 100ರೂ, ಗುಲಾಬಿ ಹೂವಿನ ಹಾರ 300ರಿಂದ 350ರೂ.
ಅಲ್ಲದೆ ನಗರದ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಾಲಾಗಿದ್ದು ಹಬ್ಬದ ಆಚರಣೆಗೆ ಬೇಕಾಗದ ವಿವಿಧ ರೀತಿಯ ಬಣ್ಣ, ಆಕಾರದ ಪಟಾಕಿಗಳನ್ನು ಸಾರ್ವಜನಿಕರು ಖರೀದಿಸಲು ಮುಂದಾಗಿರುವುದು ಕಂಡುಬಂತು.
ಹಾಗೂ ರೈತರು ತಮ್ಮ ಟ್ರಾಕ್ಟರ್‍ಗಳನ್ನು ಸಿಂಗರಿಸಲು ಬೇಕಾದ ವಿವಿಧ ಬಣ್ಣ ಬಣ್ಣದ ರಿಬ್ಬನ್, ಗೊಂಡೆವು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ರೈತರು ಖರೀದಿಸುವುದು ಕಂಡುಬಂತು.
ಒಟ್ಟಾರೇ ಈ ಬಾರಿ ಹೂವಿನ ಬೆಲೆ ಹೆಚ್ಚಾಗಿದ್ದು ಬಿಟ್ಟರೇ ಇನ್ನೂಳಿದ ಸಾಮಾಗ್ರಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.