ದೀಪಾವಳಿ : ಶೇ.70 ರಷ್ಟು ನಿಯಂತ್ರಣ – ಪಟಾಕಿ ಪ್ರಿಯರಿಗೆ ನಿರಾಸೆ

ಜನರಲ್ಲೂ ಪರಿಸರ ಮಾಲಿನ್ಯ ಜಾಗೃತಿ : ಅನೇಕ ಕಡೆ ಸ್ವಯಂ ನಿರ್ಬಂಧ
ರಾಯಚೂರು.ನ.16- ದೀಪಾವಳಿ ಎಂದರೇ ಪಟಾಕಿ ಹಬ್ಬ. ಪರಿಸರದ ಮಾಲಿನ್ಯದ ಅರಿವಿಲ್ಲದೇ, ಬಗೆ ಬಗೆಯ ಪಟಾಕಿ ಮೂಲಕ ವರ್ಷದ ಕೊನೆಯ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಜನರಿಗೆ ಈ ವರ್ಷ ಪಟಾಕಿ ಸ್ಪೋಟದ ನಿರ್ಬಂಧ ಒಂದೆಡೆ ನಿರಾಸೆ ಮೂಡಿಸಿದ್ದರೇ, ಮತ್ತೊಂದೆಡೆ ಪರಿಸರ ರಕ್ಷಣೆಯ ಪ್ರಜ್ಞೆ ಅವರ ಪಟಾಕಿ ತ್ಯಾಗಕ್ಕೆ ಸಮಾಧಾನ ಮೂಡಿಸಿತು.
ರಾಜ್ಯ ಸರ್ಕಾರ ಹಸಿರು ಪಟಾಕಿ ಹೊರತು ಪಡಿಸಿ, ಬೇರೆ ಪಟಾಕಿ ಸಿಡಿಸಲು ನಿರ್ಬಂಧವೇರಿದ್ದರಿಂದ ಪಟಾಕಿ ಮಾರಾಟ ಸಂಪೂರ್ಣ ತಡೆಯಲಾಗಿತ್ತು. ಪಟಾಕಿ ಮಾರಾಟಕ್ಕೆ ಅವಕಾಶ ಇಲ್ಲದಿರುವುದು ಪಟಾಕಿ ಸ್ಪೋಟ ತಡೆ ನಿಯಂತ್ರಣಕ್ಕೆ ಬಹುದೊಡ್ಡ ಕಾರಣವಾಗಿದ್ದರೇ ಮತ್ತೊಂದೆಡೆ ಜನರು ಸಹ ಪರಿಸರ ಜಾಗೃತಿ ಹಿನ್ನೆಲೆ ಯಲ್ಲಿ ಅನೇಕ ಕಡೆ ಪಟಾಕಿ ಸ್ಪೋಟ ತಡೆಯಲಾಗಿತ್ತು. ನಗರದಲ್ಲಿ ದೀಪಾವಳಿಯ ಮೂರು ದಿನಗಳ ಕಾಲ ನಗರದಲ್ಲಿ ಭಾರೀ ಪಟಾಕಿಯ ಸ್ಪೋಟ ಸದ್ದು ಈ ಸಲ ಅತ್ಯಂತ ಕಡೆಮೆಯಾಗಿತ್ತು.
ಅಲ್ಲಲ್ಲಿ ಕೆಲ ಯುವಕರು ಮತ್ತು ಮಕ್ಕಳು ಪಟಾಕಿ ಸಿಡಿಸಿದ ಘಟನೆ ಹೊರತು ಪಡಿಸಿದರೇ, ಶೇ.70 ರಷ್ಟು ಪಟಾಕಿ ನಿರ್ಬಂಧ ಮಾಡಲಾಗಿತ್ತು. ಇದರಿಂದ ಒಂದೆಡೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನೆರವಾಗಿದ್ದು, ಈ ದೀಪಾವಳಿ ಪರಿಸರಕ್ಕೆ ಲಾಭದಾಯಕವಾಗಿದ್ದರೇ, ಪಟಾಕಿ ಮಾರಾಟಗಾರರಿಗೆ ಅತ್ಯಂತ ನಷ್ಟಕ್ಕೆ ದಾರಿ ಮಾಡಿದೆ. ಪಟಾಕಿ ಮಾರಾಟಗಾರರು ಪಟಾಕಿ ಪರವಾನಿಗೆ ಪಡೆಯಲು ಏನೆಲ್ಲಾ ಪ್ರಯತ್ನಿಸಿದರೂ, ಕೊನೆ ಕ್ಷಣದವರೆಗೂ ಪ್ರಯತ್ನ ನಡೆದರೂ, ಆದರೆ, ಸರ್ಕಾರದ ಪರ ನಿರ್ಬಂಧ ಕಟ್ಟುನಿಟ್ಟಿನ ಹಿನ್ನೆಲೆಯಲ್ಲಿ ಯಾವುದೇ ಉಪಯೋಗವಾಗಲಿಲ್ಲ.
ಕೆಲ ಪಟಾಕಿ ಪ್ರಿಯರು ಬೇರೆ ಕಡೆಯಿಂದ ಪಟಾಕಿಗಳನ್ನು ಖರೀದಿಸಿ, ಪಟಾಕಿ ಸ್ಪೋಟಿಸಿದರು. ಪೊಲೀಸರು ಒಂದೆರಡು ಕಡೆ ದಾಳಿ ಮಾಡಿರುವ ಘಟನೆಯೂ ನಡೆದಿದೆ. ದೀಪಾವಳಿ ಅತ್ಯಂತ ಸಂಭ್ರಮ ಮತ್ತು ಬೆಳಕಿನ ಹಬ್ಬವಾಗಿದ್ದರಿಂದ ಸರ್ಕಾರದ ನಿರ್ಬಂಧದ ಮಧ್ಯೆಯೂ ಅಲ್ಲಿಯ ಪಟಾಕಿ ಸ್ಪೋಟದಂತಹ ಘಟನೆಗಳು ನಡೆದವೂ, ಪೊಲೀಸರು ಎಚ್ಚರಿಕೆಗೆ ಮಾತ್ರ ಸೀಮಿತವಾಗಿ ಕಾರ್ಯಾಚರಣೆ ನಡೆಸಿದರು. ಹಬ್ಬದ ಸಂದರ್ಭದಲ್ಲಿ ದೂರು ಮತ್ತು ಪ್ರಕರಣಗಳಿಗೆ ಅವಕಾಶ ನೀಡದೆ, ನಾಗರೀಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಅತ್ಯಂತ ಮುತ್ಸದ್ಧಿತನದಿಂದ ಕಾರ್ಯ ನಿರ್ವಹಿಸಿದರು. ಎಲ್ಲಾರೂ ಹಬ್ಬದ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸುವಂತೆ ವ್ಯವಸ್ಥೆ ನಿರ್ಮಿಸಲಾಗಿತ್ತು.