ದೀಪಾವಳಿ ವಿಶೇಷ ಸಂಚಿಕೆ ಬಿಡುಗಡೆ

ಚಿತ್ತಾಪುರ:ನ.14: ದೀಪಾವಳಿ ಹಬ್ಬದ ನಿಮಿತ್ಯವಾಗಿ “ಸಮಸ್ತ ಕನ್ನಡಿಗರ ನೆಚ್ಚಿನ ಹಾಗೂ ಸಮೃದ್ಧಿ ದಿನಪತ್ರಿಕೆಯಾದ ಸಂಜೆವಾಣಿ ಕನ್ನಡ ದಿನಪತ್ರಿಕೆಯಿಂದ ದೀಪಾವಳಿ ವಿಶೇಷ ಸಂಚಿಕೆ ಪುರಸಭೆ ನೂತನ ಅಧ್ಯಕ್ಷ ಚಂದ್ರಶೇಖರ್ ಕಾಶಿ ಹಾಗೂ ಗಣ್ಯಮಾನ್ಯರು ಬಿಡುಗಡೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಜೆವಾಣಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಗಣ್ಯಮಾನ್ಯರು ಸಂಜೆವಾಣಿ ಕನ್ನಡ ದಿನಪತ್ರಿಕೆ ಕುರಿತು ಹರ್ಷವನ್ನು ವ್ಯಕ್ತಪಡಿಸಿ ಹೀಗೆ ಸಂಜೆವಾಣಿ ಪತ್ರಿಕೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಸಾಪ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಪತ್ರಕರ್ತರಾದ ಕಾಶಿನಾಥ್ ಗುತ್ತೇದಾರ್, ಮಲ್ಲಿಕಾರ್ಜುನ್ ಬೊಮ್ಮನಹಳ್ಳಿ, ಉದಯ್ ಕುಮಾರ್ ಸಾಗರ್, ಶಿವಾಜಿ ಕಾಶಿ, ನಜೀರ್ ಆಡಿಕೆ, ಸಂಜೆವಾಣಿ ಪತ್ರಕರ್ತ ಜಗದೇವ ಕುಂಬಾರ್, ಮಹೇಶ್ ಬಟಗೇರಿ, ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ, ಕಜಾಪ ತಾಲೂಕಾ ಅಧ್ಯಕ್ಷರು ಚನ್ನವೀರ ಕಣಗಿ, ಬಂಜಾರ ಸಮಾಜದ ತಾಲೂಕ ಅಧ್ಯಕ್ಷ ಚಂದನ್ ಚವ್ಹಾಣ, ನವ ಕರ್ನಾಟಕ ರೈತ ಘಟಕ ನಗರ ಅಧ್ಯಕ್ಷರ ಜಗದೀಶ್ ಚವ್ಹಾಣ, ಬಸವರಾಜ್ ಮಡಿವಾಳ, ನಿಂಗರಾಜ್ ನಾಚವಾರ, ಸೇರಿದಂತೆ ಇತರರು ಭಾಗವಹಿಸಿದ್ದರು.