ದೀಪಾವಳಿ: ವಾರಾಣಸಿ ಜನತೆಗೆ ಮೋದಿ ಉಡುಗೊರೆ

ವಾರಾಣಸಿ, ನ ೦೭ -ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿಗೆ ಸ್ವಕ್ಷೇತ್ರದ ಜನತೆಗೆ ಹಲವು ಉಡುಗೊರೆ ನೀಡಲಿದ್ದಾರೆ.
ಇದೇ ನವೆಂಬರ್ ೯ ರಂದು “ಸ್ಮಾರ್ಟ್ ಕಾಶಿ” ನಿರ್ಮಾಣಕ್ಕಾಗಿ ಅಡಿಪಾಯ ಹಾಕಲಿದ್ದಾರೆ. ಯೋಜನೆಯಡಿ ನಗರದ ಎಲ್ಲಾ ವಾರ್ಡ್‌ಗಳನ್ನು ನವೀಕರಿಸಲಾಗುವುದು. ಅಲ್ಲದೆ, ೧೨೮ ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ ೩ ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಬೆನಿಯಾಬಾಗ್‌ನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್, ಕ್ರಿಖಿಯಾಘಾಟ್‌ನ ನವೀಕರಣ, ಸಾರನಾಥದಲ್ಲಿ ಬೆಳಕು ಮತ್ತು ಧ್ವನಿ ಯೋಜನೆ ಸೇರಿದಂತೆ, ೬೨೦ ಕೋಟಿ ರೂ.ಗಳ ಮೌಲ್ಯದ ೩೩ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಆಶ್ರಯ ಕೇಂದ್ರಗಳು, ೧೦೫ ಅಂಗನವಾಡಿಗಳಿಗೂ ಚಾಲನೆ ನೀಡಲಿದ್ದಾರೆ. ಮುಂದಿನ ಸೋಮವಾರ ೧೦. ೩೦ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ದೀಪಾವಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತದಾರರನ್ನು ಹಾರೈಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಚುವಲ್ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌದಿಂದ ಸೇರ್ಪಡೆಯಾಗಲಿದ್ದಾರೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರ್ವಾಲ್ ತಿಳಿಸಿದ್ದಾರೆ