ದೀಪಾವಳಿ ಬಳಿಕ ಮಹಾರಾಷ್ಟ್ರದಲ್ಲಿ ದೇಗುಲ ಆರಂಭ

ಪುಣೆ, ನ 8- ದೀಪಾವಳಿ ನಂತರ ರಾಜ್ಯಾದ್ಯಂತ ಪೂಜಾ ಮಂದಿರಗಳನ್ನು ಮತ್ತೆ ತೆರೆಯುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೀಪಾವಳಿಯ ಸಮಯದಲ್ಲಿ ಪಟಾಕಿ ಸುಡದಂತೆ ಮತ್ತು ಹಬ್ಬದ ಸಮಯದಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೇವಸ್ಥಾನಗಳು ಮತ್ತು ಪೂಜಾ ಸ್ಥಳಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಲ್ಲರೂ ದೀಪಾವಳಿ ಆಚರಿಸೋಣ. ಆದರೆ ದೇವಸ್ಥಾನಗಳನ್ನು ತೆರೆದರೂ, ಎಲ್ಲರೂ ಮಾಸ್ಜ್ ನ್ನು ಕಡ್ಡಾಯವಾಗಿ ಧರಿಸಬೇಕು ಎಂದರು.

ಅನೇಕ ಹಿರಿಯ ನಾಗರಿಕರು ಪದೇ ಪದೇ ಪೂಜಾ ಸ್ಥಳಗಳನ್ನು ತೆರೆಯುವಲ್ಲಿ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಈ ಹೇಳಿಕೆ ಹೊರಬರುತ್ತಿದೆ.