ದೀಪಾವಳಿ ಬಳಿಕ‌ ಸಂಪುಟ ವಿಸ್ತರಣೆ: ಸಿ.ಟಿ.ರವಿ

ಚಿಕ್ಕಮಗಳೂರು, ನ 14- ದೀಪಾವಳಿ ಬಳಿಕ ಸಂಪುಟ ವಿಸ್ರರಣೆ ಮಾಡಲಾಗುವುದು ಎಂದು ಬಿಜೆಪಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ‌‌ ಹೇಳಿದ್ದಾರೆ.
ಬಿಂಡಿಗೆ ದೇವಿರಮ್ಮನ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಬಿಹಾರದ ರಾಜಕೀಯ ಬೆಳವಣಿಗೆಗಳಲ್ಲಿ ನಿರತರಾಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರಿಷ್ಠನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಬ್ಬ ಮುಗಿದ ಬಳಿಕ ದೆಹಲಿಗೆ ತೆರಳಿ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆಂದು ತಿಳಿಸಿದರು.
ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಪುನಾರಚನೆ ಮಾಡಬೇಕೆಂಬ ಕುರಿತು ವರಿಷ್ಠರ ಜತೆ ಸಮಾಲೀಚನೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಮೂರು ರಾಜ್ಯಗಳ ಉಸ್ತುವಾರಿ ಕುರಿತಂತೆ ಪಕ್ಷ ಕೊಡುವ ಜವಾಬ್ದಾರಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ. 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಸಂಭ್ರಮ ನೆಲೆಸಿದೆ. ಯೋಗಿ ಆದಿತ್ಯಾನಾಥ್ ನೇತೃತ್ವದ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ. ಜಗತ್ತಿನ ಜನ ಸಂಭ್ರಮಿಸಿದ್ದಾರೆ. ಇದೊಂದು ಶುಭ ಸಂಕೇತ. ಆಯೋಧ್ಯೆಯಲ್ಲಿ ಮತ್ತೆ ವೈಭವ ಮರುಕಳಿಸಲಿದೆ ಎಂದು ವಿವರಿಸಿದರು.
ಬಿಹಾರದಲ್ಲಿ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಸರ್ಕಾರ ಜನಮನ್ನಣೆ ಗಳಿಸಿರುವುದು ಸುಲಭವಲ್ಲ. ಆದರೆ ನಿತೀಶ್ ಕುಮಾರ್ ಅದನ್ನು ಮಾಡಿ ತೋರಿಸಿದ್ದಾರೆ ಎಙದು ಸಿ.ಟಿ.ರವಿ ಹೇಳಿದರು.