ದೀಪಾವಳಿ ಜಾತ್ರೆ ಮಹೋತ್ಸವದ ಅಂಗವಾಗಿ ಹಾಲರವಿ ಉತ್ಸವ

ಹನೂರು, ನ.17: ದೀಪಾವಳಿ ಜಾತ್ರೆ ಮಹೋತ್ಸವದ ಅಂಗವಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ಹಾಲರವಿ ಉತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರಳವಾಗಿ ಜರುಗಿತು.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರಸಂಪ್ರದಾಯದಂತೆ ಬೇಡಗಂಪಣ್ಣ ಸಮುದಾಯದ ಹೆಣ್ಣು ಮಕ್ಕಳು 101 ಹಾಲರವಿಯನ್ನು 5 ಕಿಲೋ ಮೀಟರ್ ದಟ್ಟ ಅರಣ್ಯದಲ್ಲಿ ಹರಿಯುತ್ತಿರುವ ಹಾಲಹಳ್ಳದಿಂದ ವಿಶೇಷ ಪೂಜೆ ಸಲ್ಲಿಸಿ ಬರಿಗಾಲಿನಲ್ಲಿ ಹೊತ್ತುತಂದುದೇವರ ಪೂಜಾ ಕಾರ್ಯಗಳಿಗೆ ಸಮರ್ಪಿಸಿದರು.
ಹಾಲರವಿ ಹೊತ್ತ ಹೆಣ್ಣು ಮಕ್ಕಳು ದೇವಾಲಯದ ಸುತ್ತ ಪ್ರದಕ್ಷಿಣಿ ಹಾಕಿದರು. ಸಾಲೂರು ಬೃಹ್ಮನ್‍ಮಠದ ಮುಖ್ಯಸ್ಥರಾದ ಶಾಂತಮಲ್ಲಿಕಾರ್ಜುನಸ್ವಾಮಿಗಳುಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರದ ಅಧಿಕಾರಿಗಳು ಸಕಲ ಸಿದ್ಧತೆಯನ್ನು ಕೈಗೊಂಡಿದ್ದರು.ದೊಡ್ಡಗೋಪುರ, ಚಿಕ್ಕಗೋಪುರ, ಆಲಂಬಾಡಿ ಬಸವ, ದೇವಾಲಯದ ಮುಂಭಾಗವರ್ಣರಂಚಿತ ದೀಪಾಲಂಕಾರ ಸೇರಿದಂತೆತಳಿರು ತೋರಣಗಳು ಹಾಗೂ ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು.
ವಿಶೇಷ ಪೂಜಾ ಕೈಂಕಾರ್ಯಗಳು :ದೀಪಾವಳಿ ಹಬ್ಬದ ಪ್ರಯುಕ್ತಸ್ವಾಮಿಗೆ ಕೋವಿಡ್ 19 ಮುಂಜಾಗ್ರತಾ ಕ್ರಮಕೈಗೊಂಡು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು. ಬೆಳಿಗ್ಗೆಯಿಂದಲೇ ಸ್ವಾಮಿಗೆಎಣ್ಣೆ ಮಜ್ಜನ, ತೈಲಾಭಿಷೇಕ, ಲಕ್ಷ ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ಪೂಜೆ ವಿಧಿವಿಧಾನಗಳೊಂದಿಗೆ ಜರುಗಿದವು.
ಮೊದಲ ಭಾರಿಗೆ ಭಕ್ತರಿಲ್ಲದೇ ನಡೆದ ಹಾಲರವಿ ಉತ್ಸವ : ಸರ್ವಕಾಲಕ್ಕೂತನ್ನದೇಆದ ಶ್ರೇಷ್ಠ ಭಕ್ತಗಣವನ್ನು ಹೊಂದಿರುವ ಮಲೆಮಾದಪ್ಪನ ಸನ್ನಿಧಿಯಲ್ಲಿ ಜಾತ್ರಾ ವಿಶೇಷ ದಿನಗಳಲ್ಲಿ ಪ್ರತಿ ವರ್ಷವು ಲಕ್ಷಾಂತರ ಭಕ್ತಾಧಿಗಳು ಜಮಾಯಿಸುತ್ತಿದ್ದರೂ ಆದರೆ ಈ ಭಾರಿ ಕೋವಿಡ್ 19 ತಡಗೆಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶನ್ವದ ಜಾತ್ರಾ ವಿಶೇಷ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ತುರ್ತು ಕೆಲಸದ ಮೇಲೆ ಬರುವ ಅಧಿಕಾರಿಗಳಿಗೆ ಹೊರತುಪಡಿಸಿ ಸಾರ್ವಜನಿಕರು ಮತ್ತು ಭಕ್ತರಿಗೆ ನಿಷೇದ ಹೇರಿರುವ ಹಿನ್ನಲೆಯಲ್ಲಿ ಸರಳವಾಗಿ ಕಳೆದ ದೀಪಾವಳಿ ಅಮಾವಾಸೆಜಾತ್ರೆ ಮಹೋತ್ಸವು ನಡೆಯಿತು.
ಭಕ್ತರಿಗೆ ತಾಳಬೆಟ್ಟದಲ್ಲೇ ನಿರ್ಬಂಧ : ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಕೋವಿಡ್ 19 ತಡೆಗಟ್ಟುವು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಮಾದಪ್ಪನ ದೇವಾಲಯಕ್ಕೆ ನಾನಾ ಜಿಲ್ಲೆಗಳಿಂದ ಬರುವ ಭಕ್ತರ ವಾಹನಗಳನ್ನು ದೇವಸ್ಥಾನಕ್ಕೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ ತಾಳಬೆಟ್ಟದಲ್ಲೇ ವಾಹನಗಳನ್ನು ತಡೆದು ವಾಪಸ್ಸು ಕಳುಹಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದರು.
ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಪ್ರದಾನ ಆರ್ಚಕ ಕರವೀರಸ್ವಾಮಿ, ಮ.ಬೆಟ್ಟ ಇನ್ಸ್‍ಪೆಕ್ಟರ್ ರಮೇಶ್, ದೇವಾಲಯದ ಸಿಬ್ಬಂದಿಗಳು ಹಾಗೂ ಬೇಡಗಂಪಣ ಸಮುದಾಯ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.