ದೀಪಾವಳಿ: ಅಯೋಧ್ಯೆಯಲ್ಲಿ ಸಂಭ್ರಮದ ದೀಪೋತ್ಸವ

ಲಖನೌ, ನ ೯ – ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯ ರಾಮಜನ್ಮ ಸ್ಥಳದಲ್ಲಿ ಸುಮಾರು ೫ ಲಕ್ಷ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಸಂಭ್ರಮದ ’ದೀಪೋತ್ಸವ ನಡೆಸಲು ಉತ್ತರಪ್ರದೇಶ ಸಕಲ ಸಿದ್ಧತೆ ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪ್ರವಾಸೋದ್ಯಮ ಸಚಿವ ನೀಲಕಂಠ್ ತಿವಾರಿ, ’೫೦೦ ವರ್ಷಗಳಿಂದಲೂ ಇಂಥದ್ದೊಂದು ಸಂಭ್ರಮದ ದೀಪಾವಳಿಗೆ ಕಾಯುತ್ತಿದ್ದೆವು. ನ.೧೨ ರಿಂದ ೧೬ರವರೆಗೆ ಸಂಭ್ರಮದ ದೀಪೋತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.
ಕೊರೊನಾ ಹಾವಳಿ ಇಲ್ಲದಿದ್ದರೆ ಕೋಟ್ಯಂತರ ರಾಮಭಕ್ತರು ಅಯೋಧ್ಯೆಯಲ್ಲಿ ಸೇರಿ ದೀಪಾವಳಿ ಆಚರಣೆ ಮಾಡಲಾಗುತ್ತಿತ್ತು ಆದಕ್ಕೆ ಅವಕಾಶ ಇಲ್ಲದ ಕಾರಣ ಆನ್ ಲೈನ್ ನಲ್ಲಿ ನೇರಪ್ರಸಾರದ ಮೂಲಕ ದೇಶಾದ್ಯಂತ ರಾಮಭಕ್ತರಿಗೆ ರಾಮಜನ್ಮ ಸ್ಥಾನದಲ್ಲಿನ ಸಂಭ್ರಮದ ದೀಪಾವಳಿ ಆಚರಣೆಯನ್ನು ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.