ದೀಪಾವಳಿ ಅಮವಾಸ್ಯೆ : ಭಕ್ತರಿಂದ ಸ್ವಾಮಿಯ ದರ್ಶನ

ಸಂಜೆವಾಣಿ ವಾರ್ತೆ
ಕೊಟ್ಟೂರು ನ 06 : ಪಟ್ಟಣದ ಕೊಟ್ಟೂರೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಇಂದು ದೀಪಾವಳಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಕಲಿಯುಗದ ಕಾಮದೇನು ಕೊಟ್ಟೂರು ಪಟ್ಟಣದ ಕ್ಷೇತ್ರನಾಥ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಬೆಳಗಿನ ಜಾವ5ಗಂಟೆ ಯಿಂದಲೇ  ಸ್ವಾಮಿಯ ದರ್ಶನ ಪಡೆದು ಪುನಿತರಾದರು. ದೇವಸ್ಥಾನ ಪ್ರಧಾನ ಧರ್ಮಕರ್ತ ಸಿ.ಹೆಚ್. ಎಂ. ಗಂಗಾಧರಯ್ಯ, ಹಾಗೂ ಪುರೋಹಿತರು ಸಾಂಪ್ರದಾಯಿಕ ವಾಗಿ ಬೆಳಗಿನ ಜಾವ ಪೂಜಾವಿಧಿ ವಿಧಾನಗಳನ್ನು ನೇರವೇರಿಸಿದರು.