ದೀಪಾವಳಿ ಅಮವಾಸ್ಯೆ:ಹರಿದು ಬಂದ ಭಕ್ತ ಸಾಗರ

ಕೊಟ್ಟೂರು ನ 15 :ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಇಂದು ದೀಪಾವಳಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಕಲಿಯುಗದ ಕಾಮದೇನು ಕೊಟ್ಟೂರು ಪಟ್ಟಣದ ಕ್ಷೇತ್ರನಾಥ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನವನ್ನು ಪಡೆಯಲು ಜನಸಾಗರವೇ ಹರಿದು ಬಂದಿತು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಬೆಳಗಿನ ಜಾವ 5 ಗಂಟೆ ಯಿಂದ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಪುನಿತರಾದರು.
ದೇವಸ್ಥಾನ ಪ್ರಧಾನಧರ್ಮಕರ್ತಸಿ.ಹೆಚ್.ಎಂ.ಗಂಗಾಧರಯ್ಯ, ಪ್ರದೀಪ, ಕಾರ್ತಿಕ, ವೀರಣ್ಣ ಸೇರಿದಂತೆ ಆನೇಕರಿದ್ದರು.