ದೀಪಾವಳಿಯ ಸಡಗರ ಹೂ ಹಣ್ಣುಕಾಯಿ ಬೆಲೆ ಹೆಚ್ಚಳ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ನ,12- ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಜನತೆ ಇಂದು ನಾಳೆ ಆಚರಿಸುತ್ತಿದ್ದು. ಇಂದು ಸಂಜೆ ಲಕ್ಷ್ಮೀ ಪೂಜೆ ಮಾಡಲಿದೆ.
ಇದಕ್ಕೆ ಅಗತ್ಯವಾದ ಹಣ್ಣು ಹೂ ಕಾಯಿ ಬೆಲೆ ಮಾತ್ರ ಸಹಜವಾಗಿ ಹೆಚ್ಚಳವಾಗಿದೆ.
ನಗರದ ಇಂದಿರಾ ಸರ್ಕಲ್, ದುರ್ಗಮ್ಮಗುಡಿ, ಕುಮಾರಸ್ವಾಮಿ ಗುಡಿ, ಬೆಂಗಳೂರು ರಸ್ತೆ, ಗವಿಯಪ್ಪ ಸರ್ಕಲ್ ಬಸವೇಶ್ವರ ನಗರ ಸರ್ಕಲ್, ರೇಡಿಯೋ ಪಾರ್ಕ್ ಸರ್ಕಲ್  ಸೇರಿದಂತೆ ಹಲವಡೆ  ಬಾಳೆಗಿಡ, ಅಡಿಕೆ ಹೂ, ಬೂದ ಕುಂಬಳ ಕಾಯಿ, ಮಾವಿನ ಎಲೆ, ಚಂಡು, ಸೇವಂತಿಗೆ ಹೂ, ವಿವಿಧ ಹಣ್ಣುಗಳ ಮಾರಾಟ ನಡೆದಿದೆ. ಬೆಲೆ ಹೆಚ್ಚಳದ ಬಗ್ಗೆ ಗುನುಗುತ್ತಲೇ ಖರೀದಿ ನಡೆದಿತ್ತು ಸಂಜೆ ಅಂಗಡಿಗಳು, ಕಚೇರಿಗಳಲ್ಲಿ ಲಕ್ಷ್ಮೀ ಪೂಜೆ ನಡೆಯಲಿದೆ.
ಪಟಾಕಿಗಳ ಮಾರಾಟ ಐಟಿಐ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಹಬ್ಬದ ಅಂಗವಾಗಿ ಇಂದು ನಗರ ದೇವತೆ ದುರ್ಗಮ್ಮಗೆ ರಜತ ಕವಚದ ಅಲಂಕಾರ ಮಾಡಲಾಗಿತ್ತು.