ದೀಪಗಳ ಬೆಳಕು ಮಾನವನ ಅಭಿವೃದ್ಧಿಯ ಪಥವಾಗಿದೆ: ಶ್ರೀ ಸಾಧು ಸಿದ್ದು ಮುತ್ಯಾ

ಕಲಬುರಗಿ:ನ.17: ದೀಪಗಳ ಬೆಳಕು ಮಾನವನ ಅಭಿವೃದ್ಧಿಯ ಪಥವಾಗಿದೆ ಕತ್ತಲನ್ನು ಹೊಡೆದೋಡಿಸಿ ಬೆಳಕನ್ನು ನೀಡುವ ಶಕ್ತಿ ದೀಪಕ್ಕೆ ಇದೇ ಇದನ್ನು ನಾವು ದೈವ ಸಮಾನವೆಂದು ಸ್ವೀಕರಿಸಿ ದೀಪ ಬೆಳಗಿಸಬೇಕೆಂದು ಶ್ರೀ ಸಾಧು ಸಿದ್ದುಮುತ್ಯಾನವರು ಸಲಹೆ ನೀಡಿದರು. ಅವರು ನಗರದ ಕೋಟನೂರ (ಡಿ) ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಸಾಧು ಶಿವಲಿಂಗೇಶ್ವರ ಮಂದಿರದಲ್ಲಿ ದೀಪಾವಳಿ ಹಬ್ಬದ ನಿಮಿತ್ಯವಾಗಿ ಎರಡು ದಿನಗಳ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸುತ್ತಾ ಮಾತನಾಡಿದ ಅವರು ದೀಪಕ್ಕೆ ಆಗಾಧವಾದ ಸಾಮಥ್ರ್ಯ ಇರುವುದರಿಂದ ನಾವು ಅದನ್ನು ಕಡೇಗಣಿಸಬಾರದು ಅದು ಜೀವನದಲ್ಲಿ ಬೆಳಕು ಚೆಲ್ಲಬಹುದು ಕತ್ತಲನ್ನು ತರಬಲ್ಲದು ಆದ್ದರಿಂದ ನಾವು ಶಾಂತ ರೀತಿಯಿಂದ ಯಾರಿಗೂ ಕೇಡನ್ನು ಬಯಸದೇ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು ಎಂದು ಹೇಳುತ್ತಾ ಜೀವನದಲ್ಲಿ ಕಷ್ಟ, ದುಃಖಗಳು ಬರುತ್ತವೆ ಅದನ್ನು ಸಮಾನವಾಗಿ ಎದುರಿಸಿ ಬೆಳಕಿನೆಡೆಗೆ ಮುನ್ನಡೆಯಬೇಕು ಮತ್ತು ಪ್ರತಿಯೊಂದು ಜೀವಿರಾಶಿಯನ್ನು ನಾವು ಪ್ರೀತಿಸುವ ಮೂಲಕ ಜೀವನ ಸಾರ್ಥಕವಾಗುವಂತೆ ಜೀವಿಸಬೇಕೆಂದು ನೇರದಿದ್ದ ನೂರಾರು ಭಕ್ತಾಧಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರ ಮತ್ತು ಕೋಟನೂರ (ಡಿ), ಕೆಸರಟಗಿ, ನಂದಿಕೂರ, ಖಣದಾಳ ಹಾಗೂ ನಾಗನಹಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ನೂರಾರು ಭಕ್ತಾಧಿಗಳು ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಹಚ್ಚುವುದರ ಮೂಲಕ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ದೇವಸ್ಥಾನ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವಂತರಾಯ ಪಾಟೀಲ್, ಸದಸ್ಯರಾದ ವಿದ್ಯಾಸಾಗರ ಪಾಟೀಲ್ ಮುಂತಾದವರು ಇದ್ದರು.