ದೀಪಕ್ ಸಿಂಗ್ ಹುಟ್ಟು ಹಬ್ಬ ವಿದ್ಯಾರ್ಥಿಗೆ ನೇತ್ರಾ ತಪಾಸಣೆ ಶಿಬಿರ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ19: ಯುವ ಮುಖಂಡ ದೀಪಕ್ ಕುಮಾರ್ ಸಿಂಗ್ ರವರ ಹುಟ್ಟು ಹಬ್ಬದ ಅಂಗವಾಗಿ ಕೆಎಸ್‍ಪಿಎಲ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ನಡೆಸುವ ಮೂಲಕ ಆಚರಿಸಿಕೊಂಡರು. .
ದೀಪಕ್ ಸಿಂಗ್ ಅಭಿಮಾನಿಗಳಾದ ಆದಿತ್ಯ ಸಿಂಗ್, ಭರತ್ ಕುಮಾರ್.ಸಿ.ಆರ್, ಗಿರೀಶ್ ನಾಯ್ಕ್, ಬಿ.ಸುನೀಲ್, ಪ್ರಶಾಂತ್, ಮಂಜುನಾಥ, ಸುನೀಲ್, ಬೋಸಯ್ಯ, ದಸ್ತಗಿರಿ, ಡ್ಯಾಂ ರಮೇಶ್, ಕೃಷ್ಣ, ಭರ್ಮಪ್ಪ, ರಾಜಾ, ಯರಿಸ್ವಾಮಿ, ಚಾಂದ್ ಬಾಷಾ, ಕನ್ನೇಶ, ಓಬಳೇಶ್, ನಿಜಾಮುದ್ದೀನ್, ರಘುನಾಯ್ಕ್ ಪಾಲ್ಗೊಂಡು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ನೇತ್ರ ತಪಾಸಣೆ ಮಾಡಿಸುವ ಮೂಲಕ ವಿಶಿಷ್ಠವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಘು ಗುಜಲ್, ತಾರಿಹಳ್ಳಿ ಹನುಮಂತಪ್ಪ, ಗುಜ್ಜಲ ನಾಗರಾಜ್, ರಾಮಕೃಷ್ಣ, ವಿನಯ್ ಶೆಟ್ಟರ್, ರಘು, ಹೆಚ್.ಬಿ.ಶ್ರೀನಿವಾಸ್ ಹಾಗೂ ಲಿಂಗಣ್ಣ ಪಾಲ್ಗೊಂಡಿದ್ದರು.