ದೀನ ದಲಿತರ ಪ್ರಜ್ಞಾವಂತಿಕೆ ಹೆಚ್ಚಿಸಿದ ಮಹಾನಾಯಕ ದಾರಾವಾಹಿ ಪ್ರಸಾರ -ನಾಗರಾಜ.

ಕೂಡ್ಲಿಗಿ.ಅ.26:- ಜೀ ಕನ್ನಡ ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಪ್ರಸಾರದ ವೀಕ್ಷಣೆಯಿಂದ ದೀನ ದಲಿತರ ಪ್ರಜ್ಞಾವಂತಿಕೆ ಹೆಚ್ಚಾಗುತ್ತಿದೆ ಎಂದು ಹೊಸಹಳ್ಳಿ ಪಿಎಸ್ಐ ನಾಗರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಹೊಸಹಳ್ಳಿಲಿ ದಲಿತ ಪರ ಸಂಘಟನೆಗಳಿಂದ ಮಹಾನಾಯಕ ಧಾರಾವಾಹಿ ಪ್ರಸಾರ ಕುರಿತಂತೆ ಪ್ರಸಾರವಾಗುತ್ತಿರುವ ಧಾರಾವಾಹಿ ಮತ್ತು ಪ್ರಸಾರ ಮಾಡುತ್ತಿರುವ ಜೀ ಕನ್ನಡವಾಹಿನಿ ಚಾನಲ್ ಗೆ ಪ್ಲೇಕ್ಸಿ ಹಾಕಿ ಅಭಿನಂದನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಪ್ರಸಾರವಾಗುತ್ತಿರುವ ಮಹಾನಾಯಕ ದಾರಾವಾಹಿ ವೀಕ್ಷಣೆಯಿಂದ ಅಂದು ಜಾತಿವ್ಯವಸ್ಥೆಯಲ್ಲಿ ಬಾಬಾಸಾಹೇಬರು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಅವರು ಪಡೆದ ಉನ್ನತ ಶಿಕ್ಷಣ ಇಡೀ ಜಗತ್ತಿಗೆ ಮಾದರಿಯಾಗಿದ್ದು ವಿಶ್ವದ ಪ್ರಜ್ಞಾವಂತ ವ್ಯಕ್ತಿ ಎಂದರೆ ಅದು ಬಾಬಾಸಾಹೇಬರೆಂದು ಕೊಂಡಾಡುತ್ತಿದೆ ಎಂದರು. ದಲಿತ ಸಂಘಟನೆಯ ಮುಖಂಡರಾದ ಗಂಗಾಧರ ಮತ್ತು ಬಯಲುತುಂಬರಗುದ್ದಿ ದುರುಗೇಶ್ ಮಾತನಾಡಿ ಅಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬಡತನದಲ್ಲೂ ಉನ್ನತ ಶಿಕ್ಷಣ ಪಡೆದು ನಮ್ಮ ದೇಶಕ್ಕೆ ಸಂವಿಧಾನ ರಚಿಸಿದ ಮಹಾನ್ ಚೇತನ ಅಂಬೇಡ್ಕರ್ ರು ಅವರ ಆದರ್ಶ ನಮಗೆಲ್ಲ ದಾರಿದೀಪವಾಗಿದೆ ಅವರು ಹಚ್ಚಿದ ಹೋರಾಟದ ಹಣತೆಯನ್ನು ಎಂದು ಆರದಂತೆ ನೋಡಿಕೊಳ್ಳಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸ್ವಾವಲಂಬಿ ಜೀವನ ನಡೆಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಪ್ರಮುಖರು ಬ್ಯಾನರ್ ಉದ್ಘಾಟನೆ ಮಾಡುವ ಸಂಧರ್ಭದಲ್ಲಿ ಉಪಸ್ಥಿತರಿದ್ದರು