ದೀನದಲಿತರಿಗೆ ಸಹಾಯ ಮಾಡುವುದೇ ದೇವರ ಸೇವೆ

ಲಕ್ಷ್ಮೇಶ್ವರ, ಜೂ7: ಸಂಕಷ್ಟದಲ್ಲಿ ಇರುವ ದೀನದಲಿತರಿಗೆ ಸಹಾಯ ಮಾಡುವುದೇ ನಿಜವಾದ ದೇವರ ಸೇವೆ ಆಗಿದೆ' ಎಂದು ಸಿಪಿಆಯ್ ವಿಕಾಸ ಲಮಾಣಿ ಹೇಳಿದರು. ಪಟ್ಟಣದ ಉಮಾ ವಿದ್ಯಾಲಯದಲ್ಲಿ 1985ರಲ್ಲಿ ಎಸ್‍ಎಸ್‍ಎಲ್‍ಸಿ ಓದಿದ ಮೈತ್ರಿ-85 ಬಳಗದವರು ಸಿದ್ಧಪಡಿಸಿದ ದಿನಸಿ ಕಿಟ್‍ಗಳನ್ನು ಭಾನುವಾರ ಗುಡಿಸಲು ವಾಸಿಗಳಿಗೆ ವಿತರಿಸಿ ಅವರು ಮಾತನಾಡಿದರು. ಲಾಕ್‍ಡೌನ್‍ನಿಂದಾಗಿ ಬಡವರ ಬದುಕು ಬೀದಿಗೆ ಬಂದಿದೆ. ತುತ್ತು ಅನ್ನಕ್ಕಾಗಿ ಅವರೆಲ್ಲ ಪರಿತಪಿಸುತ್ತಿದ್ದಾರೆ. ಸಂಘ-ಸಂಸ್ಥೆಗಳು ಅವರ ಸೇವೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಮೈತ್ರಿ-85 ಬಳಗದ ಗೆಳೆಯರ ಸೇವೆ ಶ್ಲಾಘನೀಯ’ ಎಂದರು.
ಪಿಎಸ್‍ಆಯ್ ಶಿವಯೋಗಿ ಲೋಹಾರ, ಡಿ.ಎಚ್. ಪಾಟೀಲ, ಎಚ್.ಎ. ಕೆರೂರ, ರಮೇಶ ಕಮ್ಮಾರ, ಕುಮಾರ ಬಾಳೇಶ್ವರಮಠ, ದೇವಣ್ಣ ಬೆಟಗೇರಿ, ವೀರೇಶ ಸಾಲಿಮಠ, ಚಂದ್ರಶೇಖರ ವಡಕಣ್ಣವರ, ಸುರೇಶ ಚೋಟಗಲ್ಲ, ಮಲ್ಲಿಕಾರ್ಜುನ ಸೂರಣಗಿ, ಎಫ್.ಸಿ. ಪಾಟೀಲ, ಆರ್.ಸಿ. ಪಾಟೀಲ, ಮಾಲತೇಶ ಪಗಡಿ, ನಾಗರಾಜ ಹಣಗಿ, ಮೌನೇಶ ಬಾಲೆಹೊಸೂರು ಇದ್ದರು.