ದೀನದಯಾಳ್ ಸೇವೆ ಬೈರತಿ ಶ್ಲಾಘನೆ

ಕೆಆರ್ ಪುರ,ಸೆ.೨೫- ಪಂಡಿತ ದೀನದಯಾಳ ಉಪಾಧ್ಯಾಯರು ಭಾರತ ಕಂಡ ಅದ್ಭುತ ದಾರ್ಶನಿಕ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ ತಿಳಿಸಿದರು.
ಕೆಆರ್ ಪುರಂನ ಖಾಸಗಿ ಹೊಟೆಲ್ ನಲ್ಲಿ ಆಯೋಜಿಸಿದ್ದ ದೀನ ದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಅಂದಿನ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದವರು. ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬಿಜೆಪಿ ಉದಯಕ್ಕೆ ಕಾರಣವಾಯಿತು ಎಂದರು.
ಭಾರತೀಯ ಜನತಾ ಪಾರ್ಟಿ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಇವರ ಆದರ್ಶಗಳೇ ಪ್ರಮುಖ ಕಾರಣ, ಶ್ಯಾಮ್ ಪ್ರಕಾಶ್ ಮುಖರ್ಜಿ ಹಾಗೂ ದೀನ ದಯಾಳ್ ಉಪಾದ್ಯಾಯರ ಕೊಡುಗೆಗಳು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಅಂತೋಣಿಸ್ವಾಮಿ, ಮಂಜುಳಾದೇವಿ ಶ್ರೀನಿವಾಸ್, ಜಲಮಂಡಳಿ ನಿರ್ದೇಶಕ ರಾಜು, ಎಪಿಎಂಸಿ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಕೆ.ಆರ್.ಪುರ ಘಟಕದ ಅಧ್ಯಕ್ಷ ಶಮಂತ್, ಮಂಡಲ ಉಪಾಧ್ಯಕ್ಷ ರವಿಕುಮಾರ್, ಶಿವಪ್ಪ, ಗಂಗಧರ್, ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಶೀಗೆಹಳ್ಳಿ ಸುಂದರ್, ಡಿಸೇಲ್ ಮಂಜುನಾಥ್ ಇದ್ದರು.