ದೀದಿ ಹ್ಯಾಟ್ರಿಕ್: ಮೇ 5 ರಂದು ಸಿಎಂ ಆಗಿ ಪ್ರಮಾಣವಚನ

ಕೊಲ್ಕತ್ತಾ, ಮೇ.3- ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಮೇ.5 ರಂದು ಪ್ರಮಾಣ ವಚನ‌ ಸ್ವೀಕಾರ ಮಾಡಲಿದ್ದಾರೆ.

ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ‌

ಇಂದು ರಾತ್ರಿ 7 ಗಂಟೆಗೆ ರಾಜ್ಯಪಾಲ ಜಗದೀಪ್ ಧನ್ ಕರ್ ಅವರನ್ನು ಭೇಟಿ ಮಾಡಿ ಸರ್ಕಾರ‌ ರಚನೆಗೆ ಹಕ್ಕುಮಂಡಿಸಿ ಮೇ. 5 ರಂದು ಪ್ರಮಾಣ ವಚನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ.

294 ಕ್ಷೇತ್ರಗಳ‌ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 213 ಸ್ಥಾನಗಳಲ್ಲಿ ‌ಗೆಲುವು ಸಾಧಿಸಿ‌ಭರ್ಜರಿ ಜಯಗಳಿಸಿತ್ತು. ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ತಮ್ಮ ಮಾಜಿ‌ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮ ವಿಧಾನಸಭೆ‌ ಕ್ಷೇತ್ರದಿಂದ‌‌ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 1956 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ ಆದರೆ ಪಕ್ಷವನ್ನು ಅಭೂತಪೂರ್ವ ಗೆಲುವಿನ‌‌ದಡ ಸೇರಿಸಿದ್ದಾರೆ.

ನಿರಾಕರಣೆ:
ಮರು‌ ಮತ ಎಣಿಕೆ ಚುನಾವಣಾ ಆಯೋಗ ನಿರಾಕರಿಸಿದೆ

ರಾಜ್ಯಪಾಲರ ಅಭಿನಂಧನೆ:

ವಿಧಾನಸಭೆ ಚುನಾವಣೆಯಲ್ಲಿ ಅಭೂತ ಪೂರ್ಣ ಗೆಲುವು‌ ಸಾಧಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸಿದ್ದಾರೆ.