ದೀದಿ ವಿರುಧ್ದ ಮೋದಿ ವಾಗ್ದಾಳಿ


ಪಶ್ಚಿಮಬಂಗಾಳ,ಮಾ.೨೦- ಸುಲಿಗೆಕೋರರು, ಭ್ರಷ್ಟ ಜನರಿಂದ ತುಂಬಿರುವ ಆಡಳಿತದ ಅಧ್ಯಕ್ಷತೆಯನ್ನು ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥರು ವಹಿಸಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ವಿಧಾನಸಭಾ ಚುನಾವಣಾ ಪ್ರಚಾರದ ೨ನೇ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿಅವರು ಮಮತಾ ಬ್ಯಾನರ್ಜಿ ಮತ್ತು ಮತ ಬ್ಯಾಂಕ್ ರಾಜಕಾರಣವನ್ನು ಸಮಾಧಾನಪಡಿಸುವ ಆಟದಲ್ಲಿ ತೊಡಗಿದ್ದಾರೆಂದು ಮೋದಿ ಆರೋಪಿಸಿದರು.
ರಾಜ್ಯದಲ್ಲಿ ಕೈಗಾರಿಕಾ ಘಟಕಗಳು ಸ್ಥಗಿತಗೊಳ್ಳುತ್ತಿವೆ. ಕೈಗಾರಿಕಾ ಆರಂಭಕ್ಕೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಬಂಗಾಳದಲ್ಲೂ ಸಹ ಒಂದೇ ಗವಾಕ್ಷಿ ಅಸ್ಥಿತ್ವದಲ್ಲಿದೆ.
ಮಮತಾ ಸೋದರಳಿಯ ಅವರ ಮೂಲಕವೇ ಎಲ್ಲ ಕೆಲಸ ಮುಗಿಯುತ್ತಿದೆ ಎಂದು ಅವರ ಸೋದರಳಿಯನ ಹೆಸರನ್ನು ಉಲ್ಲೇಖಿಸದೆ ಮೋದಿ ಮಮತಾ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
ಅಭಿಷೇಕ್ ಸಾಮಾನ್ಯ ಜನರಿಂದ ಹಣವನ್ನು ಸುಲಿಗೆ ಮಾಡುವ ಗುಂಪನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಮೇಲಿಂದ ಮೇಲೆ ಆರೋಪಿಸಿದೆ. ಮಮತಾ ಬ್ಯಾನರ್ಜಿ ತಮ್ಮ ಪಕ್ಷಕ್ಕೆ ನೀಡಿರುವ ಟ್ಯಾಗ್ ತಿರಸ್ಕರಿಸಿರುವ ಪ್ರಧಾನಿ ಮೋದಿ ಅವರು ಬಿಜೆಪಿ ಬಂಗಾಳದ ಏಕೈಕ ನೈಜ ಪಕ್ಷವಾಗಿದೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಬಿಜೆಪಿಯ ಮುಂಚೂಣಿಯಲ್ಲಿರುವ ಜನರ ಸಂಘವನ್ನು ಸ್ಥಾಪಿಸಿದರು. ಅವರೇ ಬಂಗಾಳದ ಮಗ ಎಂದರು.
ಖೇಲಾಹೋಬ್ (ಆಟ ನಡೆಯಲಿದೆ) ಘೋಷಣೆ ಕುರಿತಂತೆ ಮಮತಾ ಅವರನ್ನು ಅಪಹಾಸ್ಯ ಮಾಡಿದ ಮೋದಿ ಅವರು, ದೀದಿರ್ ಖೇಲಾ ಶೆಶ್‌ಹೋಬ್ ವಿಕಾಸ್ ಆರಂಭ್ (ದೀದಿ ಅವರ ಆಟ ಮುಗಿಯುತ್ತದೆ ಅಭಿವೃದ್ಧಿ ಆರಂಭವಾಗುತ್ತದೆ) ಎಂದು ಹೇಳಿದರು.
ಆಯುಷ್ಮಾನ್ ಭಾರತ್ ವಿಮಾ ಯೋಜನೆ ಕುರಿತಂತೆ ಮಾತನಾಡಿದ ಮೋದಿ ಅವರು ಟಿಎಂಸಿ ಸರ್ಕಾರ ಈ ಕ್ರಮಕ್ಕೆ ಕೇಂದ್ರಕ್ಕೆ ಸಾಲ ದೊರೆಯಲಿದೆ ಎಂದು ಭಾವಿಸಿರುವುದರಿಂದ ರಾಜ್ಯದಲ್ಲಿ ಅದನ್ನು ಜಾರಿಗೆ ತಂದಿಲ್ಲ. ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಮಮತಾ ಅಡ್ಡಗೋಡೆಯಾಗಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ಕಾಂಗ್ರೆಸ್ ಎಡ ಮತ್ತು ಪ್ರಸ್ತುತ ಟಿಎಂಸಿ ಸರ್ಕಾರಗಳಿಂದ ಪಶ್ಚಿಮ ಬಂಗಾಳದಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ೨೦೧೮ರ ಪಂಚಾಯತ್ ಚುನಾವಣೆಯ ನಂತರ ಸುಮಾರು ೧೩೦ ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ.
ಮಮತಾ ದೀದಿ ಕ್ರೂರತೆ ಶಾಲೆ ನಡೆಸುತ್ತಿದ್ದಾರೆ. ಅಲ್ಲಿ ಸುಲಿಗೆ, ಕೊಲೆ, ಸಿಂಡಿಕೇಟ್, ಹರಾಜಕತೆಪಠ್ಯಕ್ರಮದ ಭಾಗ ಎಂದು ಮೋದಿ ಆಪಾದಿಸಿದರು.