ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಭಕ್ತ

ತಾಳಿಕೊಟೆ:ಮೇ.16:ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ರಾಜುಗೌಡ ಪಾಟೀಲ ಅವರು ಶಾಸಕರಾಗಿ ಆಯ್ಕೆಯಾಗಲೆಂದು ಹರಕೆ ಹೊತ್ತಿದ್ದ ಬೊಮ್ಮನಹಳ್ಳಿ ಗ್ರಾಮದ ಅಭಿಮಾನಿಯೊಬ್ಬರು ಬೇಡಿಕೆ ಇಡೇರಿದ್ದರಿಂದ ಸುಮಾರು 6 ಕೀ.ಮೀ. ವರೆಗೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ದೀಡ ನಮಸ್ಕಾರ ಹಾಕಿ ಸೋಮವಾರರಂದು ಹರಕೆ ತೀರಿಸಿದ್ದಾರೆ.

  ಬೊಮ್ಮನಹಳ್ಳಿ ಗ್ರಾಮದ ಈರಣ್ಣ ಕಲ್ಬುರ್ಗಿ ಎಂಬ ದೇವರ ಹಿಪ್ಪರಗಿ ಶಾಸಕರಾಗಿ ಆಯ್ಕೆಯಾದ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರ ಅಭಿಮಾನಿಯು ಬೊಮ್ಮನಹಳ್ಳಿ ಗ್ರಾಮದ ಶ್ರೀ ಅಂಬ್ಲೇಶ್ವರ ಮಠದಿಂದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದವರೆಗೆ ಸುಮಾರು 6 ಕೀಲೊ ಮೀಟರ್ ದೀಡ ನಮಸ್ಕಾರ ಹಾಕಿದ್ದಾನೆ. ಅವನ ಹರಕೆಯು ಹೊತ್ತಂತೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಅತ್ಯಧಿಕ ಮತಗಳಿಂದ ಜಯ ಶಾಲಿಯಾಗಿದ್ದಾರೆ. ಹೀಗಾಗಿ ರಾಜುಗೌಡ ಪಾಟೀಲ ಅವರ ಅಪ್ಪಟ ಅಭಿಮಾನಿ ಈರಣ್ಣ ಕಲ್ಬುರ್ಗಿ ಅವರು ಇಂದು ದೀಡ ನಮಸ್ಕಾರ ಹಾಕುವದರೊಂದಿಗೆ ತಮ್ಮ ಹರಕೆಯನ್ನು ತೀರಿಸಿದ್ದಾರೆ. ನಂತರ ಶ್ರೀ ಖಾಸ್ಗತ ಮಠದಲ್ಲಿ ಶ್ರೀ ಖಾಸ್ಗತರ. ವೀರಕ್ತಶ್ರೀಗಳ ಗದ್ದುಗೆಗೆ ಮಹಾ ಪೂಜೆ ಸಲ್ಲಿಸಿ  ಶ್ರಿಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು.
   ಈ ಸಮಯದಲ್ಲಿ ಜೆಡಿಎಸ್ ತಾಲೂಕಾ ಕಾರ್ಯಾದ್ಯಕ್ಷ ಮಡುಸಾಹುಕಾರ ಬಿರಾದಾರ,  ಮುಖಂಡರಾದ ನಿಂಗು ಕಲ್ಬುರ್ಗಿ, ಜಗನ್ನಾಥ ಮಸರಕಲ್ಲ, ಸಾಹೇಬಗೌಡ ಪಾಟೀಲ, ದೇವರಾಜ ನಾಯ್ಕಲ್, ಶ್ರೀಶೈಲ ದೋರನಳ್ಳಿ, ಯಂಕು ಕದ್ನಳ್ಳಿ, ಶಾಂತಕುಮಾರ ದ್ವಾರನಳ್ಳಿ (ಸ್ವಾಮಿ), ಸೋಮು ಮಸರಕಲ್ಲ, ಮೊದಲಾದವರು ಇದ್ದರು.