ದೀಕ್ಷಾರ್ತಿ ಚಂದನಾ ನಾಹರ್ ಅವರ ಭವ್ಯ ಮೆರವಣಿಗೆ

ಸಿಂಧನೂರು.ನ.೧೯- ಜೈನ್ ಮುನಿಯಾಗಿ ದೀಕ್ಷೆ ಪಡೆಯುತ್ತಿರುವ ಚಂದನಾ ನಾಹರ್ ಅವರಿಗೆ ಆನೆ ಮೇಲೆ ಕೂರಿಸಿ ಶುಕ್ರವಾರ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ನಗರದ ಹಳೇಬಜಾರದ ಜೈನ್ ಮಂದಿರದಿಂದ ಆರಂಭವಾದ ಭವ್ಯ ಮೆರವಣಿಗೆಯೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜೈನ್ ಕಲ್ಯಾಣ ಮಂಟಪ ತಲುಪಿತು. ದಾರಿಯುದ್ದಕ್ಕೂ ಜೈನ್ ಸಮಾಜದ ಮುಖಂಡರಿಂದ ಬಡವರಿಗೆ ಸೀರೆ, ಬೆಡ್ ಶೀಟ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಿತರಿಸಲಾಯಿತು. ಕುದುರೆ ಕುಣಿತ, ತಾಷಾ ಭಜಂತ್ರಿಗಳ ಮೂಲಕ ನಡೆದ ಮೆರವಣಿಗೆ ಆಕರ್ಷಕವಾಗಿತ್ತು.
ನಗರದ ರಾಜೇಂದ್ರ ನಾಹರ್ ಅವರ ಮಗಳಾದ ಚಂದನಾ ನಾಹರ್ ಅವರು ಪರಿವಾರವನ್ನು ತ್ಯಾಗ ಮಾಡಿ, ಇದೇ ಡಿ.೨ ರಂದು ದೀಕ್ಷೆ ಪಡೆಯಲಿದ್ದು, ಅದರ ಅಂಗವಾಗಿ ಇಂದು ಜೈನ್ ಸಮಾಜದಿಂದ ಭವ್ಯ ಮೆರವಣಿಗೆ ಮಾಡಲಾಯಿತು.
ಜೈನ್ ಸಮಾಜದ ಮುಖಂಡರಾದ ಶ್ರೇಣಿಕ್ ರಾಜ್ ಶೇಠ್, ಅಶೋಕ ಚಲಾನಿ, ಅಜಿತ್ ಓಸ್ತವಾಲ್, ಸುಜೀತ್ ಓಸ್ತವಾಲ್, ಗೌತಮ್ ಬಂಬ್, ಗೌತಮ್ ಸಾಜೀಯಾ, ಸುರೇಶ ನಾಹರ್, ಅಶೋಕ್ ಬಂಬ್, ಗೌತಮ್ ಮೆಹ್ತಾ ಸೇರಿದಂತೆ ಸಮಾಜದ ಅನೇಕರು ಇದ್ದರು.