ದಿ:10ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ


ನರೆಗಲ್ಲ,ಮಾ.8:ಪಟ್ಟಣದರವಿ ದಂಡಿನ ಅಭಿಮಾನಿ ಬಳಗದ ವತಿಯಿಂದ ಮಾ 10 ರಂದು ಗಜೇಂದ್ರಗಡ ರಸ್ತೆಯ ಕೆ,ಎಸ್,ಎಸ್.ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರೋಣ ಮತ ಕ್ಷೇತ್ರದ ವ್ಯಾಪ್ತಿಯ ಕ್ರೀಡಾಪಟುಗಳಿಗಾಗಿ ಹೊನಲು ಬೆಳಕಿನ ಕಬಡ್ಡಿ ರಂದು ಹಾಗೂ ಜಯ ಪ್ರಿಯಾ ಆಸ್ಪತ್ರೆ ಹುಬ್ಬಳ್ಳಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನರೆಗಲ್ಲ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.ಎಂದು ಪಟ್ಟಣದ ರವಿ ದಂಡಿನ ಅಭಿಮಾನಿ ಬಳಗದ ಶರಣಪ್ಪ ಕಲಾಲಬಂಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಡಿನವರು ನಾಡಿನ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಹಲವಾರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿದ್ದಾರೆ. ಅದೇ ರೀತಿಯಾಗಿ ನರೆಗಲ್ಲ ಪಟ್ಟಣದಲ್ಲಿ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಇದ್ದಾರೆ ಎಂದರು.
ಹರೀಶ ಪೂಜಾರ ಮಾತನಾಡಿ ಮಾ 10ರಂದು 10:00 ಗಂಟೆಗೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಲಿದೆ. ಅಂದೇ ಮಧ್ಯಾಹ್ನ 3:00 ಗಂಟೆಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು ಈಗಾಗಲೇ 22 ತಂಡಗಳು ಹೆಸರನ್ನು ನೊಂದಾಯಿಸಿವೆ.ಅಂದಾಜು 40 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.ಕಬಡ್ಡಿ ಪಂದ್ಯಾವಳಿಯು ಪ್ರವೇಶ ಉಚಿತವಾಗಿದ್ದು ನೋಂದಣಿ ಕೊನೆಯಾ ದಿನಾಂಕ 8 ಸಾಯಂಕಾಲ 4ವರೆಗೆ ಇರುತ್ತದೆ ಆದಷ್ಟು ಬೇಗ ತಂಡಗಳು ಹೆಸರು ನೊಂದಾಯಿಸಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪ್ರವೀಣ ಕನ್ಯಾಳ,ನೀಲಪ್ಪ ತೊಂಡಿಹಾಳ,ಇದ್ದರು.