ದಿ.8 ರಂದು ಸಂಜೆ ಸಂಗೀತೋತ್ಸವ

ಧಾರವಾಡ ಏ6: ಕರ್ನಾಟಕ ವಿದ್ಯಾವರ್ಧಕ ಸಂಘವು ಭಾರತ ರತ್ನ ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವದ ಅಂಗವಾಗಿ ದಿ.8 ರಂದು ಗುರುವಾರ ಸಂಜೆ 6 ಗಂಟೆಗೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಧಾರವಾಡದ ಪದ್ಮಶ್ರೀ ಪಂ. ಡಾ. ಎಂ. ವೆಂಕಟೇಶಕುಮಾರ ಅವರು ಆಗಮಿಸುವರು.
ಪುಣೆಯ ಪಂ. ಆನಂದ ಭೀಮಸೇನ ಜೋಶಿ ಅವರನ್ನು ಗೌರವಿಸಿ, ಸನ್ಮಾನಿಸಲಾಗುವುದು.
ಹುಬಳ್ಳಿ ನವನಗರದ ಸಾಹಿತಿಗಳಾದ ಡಾ. ಶಾಮಸುಂದರ ಬಿದರಕುಂದಿ ಅವರು ಅಧ್ಯಕ್ಷತೆ ವಹಿಸುವರು.
ಸಂಗೀತ ಕಾರ್ಯಕ್ರಮ :
ಪುಣೆಯ ಗಾಯಕರಾದ ಪಂ. ಆನಂದ ಭೀಮಸೇನ ಜೋಶಿ ದಾಸ ವಾಣಿ ಸಂಗೀತ ಕಾರ್ಯಕ್ರಮ ನೀಡಲಿದ್ದು, ಪುಣೆಯ ನೀತಾ ದಿಕ್ಷೀತ್ ಸಂವಾದಿನಿ ಸಾಥ್ ಮತ್ತು ತೇಜಸ್ ಆನಂದ ಜೋಶಿ ತಬಲಾ ಸಾಥ್ ನೀಡಲಿದ್ದಾರೆ.
ಖ್ಯಾತ ಹಿಂದೂಸ್ಥಾನಿ ಗಾಯಕರಾದ ಪದ್ಮಶ್ರೀ ಎಂ. ವೆಂಕಟೇಶಕುಮಾರ ಹಿಂದೂಸ್ಥಾನ ಸಂಗೀತ ಪ್ರಸ್ತುತಪಡಿಸಲಿದ್ದು, ಧಾರವಾಡದ ಗುರುಪ್ರಸಾದ ಹೆಗಡೆ ಸಂವಾದಿನಿ ಸಾಥ್ ಮತ್ತು ಬೆಂಗಳೂರಿನ ಕೇಶವ ಜೋಶಿ ತಬಲಾ ಸಾಥ್ ನೀಡಲಿದ್ದಾರೆ.
ಕಲಾವಿದರು, ಸಂಗೀತಗಾರರು, ಸಾಹಿತಿಗಳು, ಕಲಾಪ್ರೇಮಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಆಸಕ್ತರು, ಸಂಘದ ಸದಸ್ಯರು ಭಾಗವಹಿಸಬೇಕೆಂದು ಮತ್ತು ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಹಾಗೂ ಮಾಸ್ಕ್ ಧರಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಶಂಕರ ಕುಂಬಿ ಜಂಟಿಯಾಗಿ ತಿಳಿಸಿದ್ದಾರೆ.