ದಿ.8 ರಂದು ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಧಾರವಾಡ,ಏ2: ನಗರದ ಶಾಲ್ಮಲಾ ನದಿಯಿಂದ ಸಂಗ್ರಹವಾಗುವ ಕೆರೆಯ ನೀರನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರು ಸೇರಿ ಖಾಲಿ ಮಾಡಿದ್ದನ್ನು ಪ್ರತಿಭಟಸಿ ಇದೇ ದಿ. 8 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸುಧೀರ್ ಮುಧೋಳ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶಾಲ್ಮಲಾ ನದಿಯ ನೀರು ಸಕಲ ಜನ ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ನೀರನ್ನು ಜಲಸಂಜೀವಿನಿಯಂತೆ ಒದಗಿಸುತ್ತಿದೆ . ಈ ಪ್ರದೇಶದ ರಾಜೀವ ಗಾಂಧಿ ನಗರದ ದಲಿತರು , ಹಿಂದುಳಿದವರು , ಅಲ್ಪಸಂಖ್ಯಾತರು ಹಾಗೂ ಸುಡುಗಾಡು ಸಿದ್ಧರ ಕಾಲೋನಿಯ ಜನರಿಗೆ ಜಲಾಶಯವನ್ನು ಒದಗಿಸಿದ್ದು ಇರುತ್ತದೆ ಎಂದರು.
ಪ್ರಸ್ತುತ ಶಾಲ್ಮಲಾ ನದಿಯಿಂದ ಸೋಮೇಶ್ವರ ಕೆರೆ , ನುಗ್ಗೆಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು ಜನ , ಜಾನುವಾರು ಹಾಗೂ ಪಕ್ಷಿಗಳಿಗೆ ಸಂಜೀವಿನಿಯಂತೆ ಇದೆ . ಈ ವರ್ಷ ಬಿರು ಬೇಸಿಗೆ ಆರಂಭಗೊಂಡಿದ್ದು ಸೋಮೇಶ್ವರದ ಇಡೀ ಕೆರೆಯ ನೀರನ್ನು ಒಡ್ಡು ಒಡೆದು ಪೆÇೀಲು ಮಾಡಲಾಗಿದೆ.
ಪ್ರತಿಶತ 85 % ನೀರನ್ನು ಪೆÇೀಲು ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ನೀರು ಕಾಲಿ ಮಾಡುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಹಾಗೂ ಜಲಜೀವಿಗಳು , ಮೀನುಗಳು , ನೀರನ್ನು ಅರಸಿಕೊಂಡು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಸ್ಥಿತಿ ಎಂಥಹವರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಈ ನಾಡಿನ ಪ್ರಜ್ಞಾವಂತ ಪ್ರಜೆಗಳು ಹಾಗೂ ಪರಿಸರವಾದಿಗಳಾದ ನಾವು ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಈ ಮೂಲಕ ಆಗ್ರಹಪಡಿಸುವುದೇನೆಂದರೆ ಲಕ್ಷಾಂತರ ರೂ,ಗಳ ವೆಚ್ಚದಲ್ಲಿ ಕೈಗೊಂಡ ಈ ಜನೋಪಯೋಗಿ ಪರಿಸರ ಪ್ರೇಮಿ ದೃಷ್ಟಿಯನ್ನು ಒಳಗೊಂಡಿರಬೇಕು . ಸಾರ್ವಜನಿಕರಿಗೆ ಜನ , ಪ್ರಾಣಿ , ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಕಂಟಕವಾಗಿರುವ ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ನಮ್ಮ ಸಂಘಟನೆ ಸರಕಾರದ ನಿಯಮಾವಳಿಗಳ ಪ್ರಕಾರ ( ಕೋವಿಡ್ -19 ) ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ದಿ.8 ರಂದು “ ಸೋಮೇಶ್ವರ ಕೆರೆ ಉಳಿಸಿ , ಶಾಲ್ಮಲಾ ನದಿಯ ಸಾರ್ಥಕತೆಯನ್ನು ಕಾಪಾಡಿ ” ಎಂಬ ಘೋಷವಾಕ್ಯದೊಂದಿಗೆ ಜಯ ಕರ್ನಾಟಕ ಸಂಘಟನೆ ಜಾಗೃತಿ ಜಾಥಾವನ್ನು ಸೋಮೇಶ್ವರ ಕೆರೆಯಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆಯನ್ನು ಮಾಡಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಯ ಕನಾ9ಟಕ ಸಂಘಟನೆಯ ಜಿಲ್ಲಾ ಅದ್ಯಕ್ಷ ಸುಧೀರ ಮುಧೋಳ .ಲಕ್ಷ್ಮಣ ದೋಡಮನಿ,ಚಂದ್ರು ಅಂಗಡಿ,ಮಂಜುನಾಥ ಸುತಗಟ್ಟಿ, ಎಮ್ ಎನ್ ಮಲ್ಲೂರ ಇನ್ನಿತರರು ಉಪಸ್ಥಿತರಿದ್ದರು.