
ಚನ್ನಮ್ಮನ ಕಿತ್ತೂರು,ಸೆ.6: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮಿಸಲಾತಿ ನೀಡುವ ಹಿನ್ನಲೆಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡುವ ಉದ್ದೇಶದಿಂದ ಸೆ 7 ರಂದು ಮದ್ಯಾಹ್ನ 1 ಗಂಟೆಗೆ ಸ್ಥಳೀಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಕಿತ್ತೂರು ತಾಲೂಕಾ ಮಟ್ಟದ ಶ್ರಾವಣ ಸಂದೇಶ ಸಭೆಯನ್ನು ಕರೆಯಲಾಗಿದೆ ಎಂದು ಕಿತ್ತೂರು ತಾಲೂಕಾ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಿ. ಆರ್.ಪಾಟೀಲ ತಿಳಿಸಿದ್ದಾರೆ.
ಕಿತ್ತೂರು ತಾಲೂಕಾ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಬಸವರಾಜ ಚಿನಗುಡಿ ಮಾತನಾಡಿ ಕಿತ್ತೂರು ತಾಲೂಕಾ ಮಟ್ಟದ ಶ್ರಾವಣ ಸಂದೇಶ ಸಭೆಗೆ ಕೂಡಲ ಸಂಗಮದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಸಮಾಜದ ಮುಖಂಡರು, ಶಾಸಕರು, ಜನಪ್ರತಿನಿದಿಗಳು ಆಗಮಿಸಲಿದ್ದು ಕಿತ್ತೂರು ತಾಲೂಕಿನ ಎಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು, ತಾಲೂಕು ಪದಾಧಿಕಾರಿಗಳು , ಮೀಸಲಾತಿ ಚಳುವಳಿಗಾರರು , ಮಹಿಳೆಯರು, ನೌಕರರು , ತೇಜಸ್ವಿ ಯುವಕರು , ಪಂಚಸೇನಾ ಪದಾಧಿಕಾರಿಗಳು, ವಿವಿಧ ಘಟಕಗಳ ಸದಸ್ಯರು ಸೇರಿದಂತೆ ಸರ್ವರೂ ಅಗಮಿಸಬೇಕು ಎಂದು ಮನವಿ ಮಾಡಿದ್ದಾರೆ.