ದಿ. 7 ರಂದು ಅಭಿನಂದನಾ ಸಮಾರಂಭ


ಮುಧೋಳ,ಜ.5: ನಿರಂತರವಾಗಿ ಸಮಾಜಸೇವೆಯನ್ನು ಮಾಡುವುದಕ್ಕಾಗಿ ಬಿ.ಡಿ.ಸಿ.ಸಿ. ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಈಗ ಸ್ವಯಂನಿವೃತ್ತಿ ಪಡೆದಿರುವ ಡಾ.ಟ.ವ್ಹಿ.ಅರಳಿಕಟ್ಟಿಯವರನ್ನು ಅಭಿನಂದಿಸುವುದಕ್ಕಾಗಿ ದಿ. 7 ಶನಿವಾರ ಸಾಯಂಕಾಲ 6ಘಂಟೆಗೆ ನಗರದ ರನ್ನ ಕ್ರೀಡಾಂಗಣದಲ್ಲಿ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಾಹಿತಿ ಡಾ.ಸಿದ್ದು ದಿವಾಣ ತಿಳಿಸಿದರು.
ನಗರದ ಕಾನಿಪ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೃಷಿ,ಸಾಹಿತ್ಯಿಕ,ಸಾಂಸ್ಕøತಿಕ,ಆರ್ಥಿಕ,ಸಾಮಾಜಿಕ,ಶೈಕ್ಷಣಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುವ ಮೂಲಕ ಸಾಧನೆ ಮಾಡುತ್ತಿರುವ, ಜನ ಸಾಮಾನ್ಯರ ಏಳ್ಗೆಗಾಗಿ ಅರಳೀಕಟ್ಟಿ ಫೌಂಡೇಶನ್ ನಿರ್ಮಿಸಿ ರೈತರಿಗೆ, ದೀನದಲಿತರಿಗೆ, ಬಡವ-ಬಲ್ಲಿದರೆನ್ನದೇ ಸಕಲರ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕಿನಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ಈಗ ಸಮಾಜಸೇವೆಗಾಗಿ ಕಂಕಣಬದ್ಧರಾಗಿರುವ ಡಾ.ಟಿ.ವ್ಹ.ಅರಳಿಕಟ್ಟಿಯವರಿಗೆ ಮುಧೋಳ ತಾಲೂಕಾ ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಮುಧೋಳ ತಾಲೂಕಾ ರೈತ ಸಹಕಾರಿಗಳು, ತಾಲೂಕಾ ಎಲ್ಲ ಸಹಕಾರಿ ನೌಕರರ ಬಳಗ ಮತ್ತು ಟಿ.ವ್ಹಿ.ಅರಳಿಟ್ಟಿಯವರ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಭಿನಂದನಾ ಸಮಾರಂಭದ ನಂತರ ಬೆಂಗಳೂರಿನ ನಟರಾಜ್ ಎಂಟರ್‍ಟ್ರೇನರ್ಸ್ ಇವರ ನೇತೃತ್ವದಲ್ಲಿ ಸಂಗೀತ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ, ರ್ಯಾಪ್-ಪಾಪ್ ಗಾಯಕ ಚಂದನಶೆಟ್ಟಿ, ಅನುರಾಧಾ ಭಟ್, ಸಂಗೀತಾ ರವೀಂದ್ರನಾಥ, ಕಂಬದ ರಂಗಯ್ಯ, ಅಜಯ ವಾರಿಯರ್ ಸೇರಿದಂತೆ ಮುಂತಾದ ಗಾಯಕರು ಸಂಗೀತ ರಸದೌತಣ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 50-60 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ 25 ಸಾವಿರ ಆಸನದ ವ್ಯವಸ್ಥೆ ಸೇರಿದಂತೆ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಅಂದು ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ ನೀಡಲಿದ್ದು, ಮತ್ತು ಫೌಂಡೇಶನ್ ವತಿಯಿಂದ ಬೆಳಗಾವಿಯಿಂದ ಖಾಸಗಿ ಸೆಕ್ಯೂರಿಟಿಯನ್ನು ಸಹ ನೇಮಿಸಲಾಗಿದೆ ಎಂದು ಅವರು ವಿವರಿಸಿದರು. ಅಭಿನಂದನಾ ಸಮಾರಂಭದಲ್ಲಿ ಪಕ್ಷಾತೀತವಾಗಿ ಸಚಿವರು, ಶಾಸಕರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ದಿವಾಣ ತಿಳಿಸಿದರು.
ಪ್ರಮುಖರಾದ ಸುಭಾಸ ಕೋರಡ್ಡಿ ಮಾತನಾಡಿದರು. ಮುಖಂಡರಾದ ಅನಂತರಾವ ಘೋರ್ಪಡೆ, ಸದಪ್ಪ ತೇಲಿ, ವಾಯ್.ಬಿ.ಮುನ್ನೋಳ್ಳಿ, ಅರ್ಜುನ ಚೌರಡ್ಡಿ, ರವಿ ೂೀಲೂರ, ರಾಚಪ್ಪ ಕಣಬೂರ, ದಿ ಸಿಟಿ ಕೋ ಆಪರೇಟಿವ್ಹ ಸಹಕಾರಿ ಸಂಘದ ವ್ಯವಸ್ಥಾಪಕ ಆರ್.ಎ.ಘಂಟಿ ಉಪಸ್ಥಿತರಿದ್ದರು.