
ಲಕ್ಷ್ಮೇಶ್ವರ,ಮಾ4: ಪಟ್ಟಣದಲ್ಲಿ ಸೋಮವಾರ ದಿನಾಂಕ 6 ರಂದು ಬಂಜಾರ ಲಂಬಾಣಿ ಸಮಾಜದ ಕುಲದೈವ ಸಂತ ಸೇವಾಲಾಲರ 284 ನೇ ಜಯಂತಿಯನ್ನು ಆಚರಿಸಲಾಗುವುದು ಎಂದು ಸಮಾಜದ ಹಿರಿಯ ಮುಖಂಡ ಟೋಪಣ್ಣಾ ಲಮಾಣಿ ಅವರು ಹೇಳಿದರು.
ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೇವಾಲಾಲ್ ಜಯಂತೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿ ದಿನಾಂಕ 6 ರಂದು ಬಂಜಾರ ಲಂಬಾಣಿ ಸಮಾಜದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರರ ಸಮಸ್ತ ಜನಾಂಗ ಸೇರಿಕೊಂಡು ಉತ್ಸವವನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಶಿವಪ್ಪ ಲಮಾಣಿ ಮಾತನಾಡಿ ತಾಲೂಕಿನ ಮತ್ತು ಶಿರಹಟ್ಟಿ ತಾಲೂಕಿನ ನಾಯಕ್ ಡಾವ ಮತ್ತು ಕಾರ್ಬಾರಿ ಸೇರಿದಂತೆ ವಿವಿಧ ಘಟಕಗಳ ಸಯುಕ್ತ ಆಶ್ರಯದಲ್ಲಿ ಸೇವಾಲಾಲ್ರ ಜಯಂತಿಯನ್ನು ಆಚರಿಸಲಾಗುತ್ತಿದೆ.
ದಿನಾಂಕ 6 ರಂದು ಬೆಳಿಗ್ಗೆ 10:00ಗೆ ಲಕ್ಷ್ಮೇಶ್ವರದ ಪಂಪ ವೃತ್ತದಿಂದ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮೇಶ್ವರ ದೇವಸ್ಥಾನದ ತೇರಿನ ಮನೆ ಆವರಣದಲ್ಲಿನ ವೇದಿಕೆಯನ್ನು ತಲುಪಲಿದೆ ಎಂದರು.
ಕಾರ್ಯಕ್ರಮಕ್ಕೆ ಮಠಾಧೀಶರು ಬಂಜಾರ ಸಮಾಜದ ಮಠಾಧೀಶರು ಶಾಸಕರು ಸಂಸದರು ಸಮಾಜದ ಹಿರಿಯ ಮುಖಂಡರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ದೇವಪ ಲಮಾಣಿ ಈ ಸಂದರ್ಭದಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶ ನಾಯಕ ಪುಂಡಲಿಕ ಲಮಾಣಿ ಸೋಮಣ್ಣ ಲಮಾಣಿ ಪರಮೇಶ ಲಮಾಣಿ ಗಣೇಶ ಲ ಮಾಣಿ ಸೋಮರೆಡ್ಡಿತಾವರೆಪ ಲಮಾಣಿ ನಾನಪ್ಪ ಲಮಾಣಿ ಮಾನಪ್ಪ ಲಮಾಣಿ ಲಾಲಪ ಲಮಾಣಿ ಗೇಮಪ ಲ ಮಾಡಿ ಶೇಖಪ್ಪ ಲಮಾಣಿ ಸಂತೋಷ ರಾಥೋಡ ಸಮಾಜದ ಮುಖಂಡರು ಇದ್ದರು.