
ಹುಬ್ಬಳ್ಳಿ,ಏ4 : ನಗರದ ಮಜೇಥಿಯಾ ಫೌಂಡೇಶನ್ ಹಾಗೂ ಕೆಸಿಟಿಆರ್ ಐ ಸಹಯೋಗದಲ್ಲಿ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವಣದಲ್ಲಿರುವ ಉಚಿತ ಹಾಸ್ಪೈಸ್ ಪ್ಯಾಲಿಯೆಟಿವ್ ಕೇಂದ್ರದಲ್ಲಿ ರಮಿಲಾ ಪ್ರಶಾಂತಿ ಮಂದಿರ ಉದ್ಘಾಟನಾ ಸಮಾರಂಭ ಎ. 6 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಕೆ. ರಮೇಶ ಬಾಬು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭ ಸಾನಿಧ್ಯ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕರುಣಾಶ್ರಯ ಮ್ಯಾನೇಜಿಂಗ್ ಗುರುಮಿತ್ ಸಿಂಗ್ ರಾಂಧಾವಾ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಕೆಸಿಟಿಆರ್ ಐ ಡಾ. ಆರ್ . ಪಾಟೀಲ ಹಾಗೂ ಅಧ್ಯಕ್ಷತೆ ಮೆಜೇಥಿಯಾ ಫೌಂಡೇಶನ್ ನ ಚೇರಮನ್ ಜಿತೇಂದ್ರ ಮೆಜೇಥಿಯಾ ಭಾಗಹಿಸುವರು ಎಂದರು.
ಹಾಸ್ಪೈಸ್ ಅನಾರೋಗ್ಯ ಪಿಡಿತ ಹಾಗೂ ಮಾನಸಿಕವಾಗಿ ನೊಂದ ರೋಗಿಗಳಿಗೆ ಆರೋಗ್ಯ ಸೌಲಭ್ಯ, ಶಾಂತಿ ಹಾಗೂ ಸಾಂತ್ವನ ನೀಡುವ ಕಾರ್ಯ ಮಾಡುತ್ತಿದೆ. ಕಳೆದ ವರ್ಷ ಹಾಸ್ಪೈಸ್ ಕೇಂದ್ರ ಸ್ಥಾಪಿಸಲಾಗಿತ್ತು. ಸುಮಾರು 30 ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಧ್ಯಾನ ಮಾಡಲು ರಮಿಲಾ ಪ್ರಶಾಂತಿ ಮಂದಿರ ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಹಾಸ್ಪೈಸ್ ಕೇಂದ್ರ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಡಾ. ವಿ.ಬಿ. ನಿಟಾಲಿ, ಎಚ್.ಆರ್. ಪ್ರಹ್ಲಾದ ರಾವ್, ಅಮೃತ ಪಟೇಲ, ಡಾ. ಬಿ. ಆರ್ ಪಾಟೀಲ ಇದ್ದರು.