ದಿ. 5 ರಂದು ಪಂಚವಟಿ ಗೋಶಾಲೆ ಉದ್ಘಾಟನೆ


ಹುಬ್ಬಳ್ಳಿ, ಮಾ.2: ತಾಲೂಕಿನ ಭಂಡಿವಾಡದ ಗ್ರಾಮದಲ್ಲಿ ಪಂಚವಟಿ ಗೋಶಾಲೆ ಉದ್ಘಾಟನೆ ಹಾಗೂ ಸಾವಯುವ ಕೃಷಿ ದೀಕ್ಷಾ ಕಾರ್ಯಕ್ರಮವನ್ನು ಮಾರ್ಚ್ 5 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ಗದಗ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಭಾರತೀ ಮಹಾಸ್ವಾಮಿಗಳು ವಹಿಸಲಿದ್ದು, ಗೌರಿಗದ್ದೆಯ ದತ್ತಾಶ್ರಮದ ವಿನಯ ಗುರೂಜಿ ಅವರು ಉದ್ಘಾಟಿಸಲಿದ್ದಾರೆ ಎಂದರು.

ಸಮ್ಮುಖವನ್ನು ಶಿಗ್ಗಾಂವ ವಿರಕ್ತಮಠದ ಸಂಗನಬಸವ ಸ್ವಾಮಿಗಳು, ಅಧ್ಯಕ್ಷತೆಯ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ್, ಅಮೃತ ದೇಸಾಯಿ, ವಿ.ಪ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ್ ಶೆಟ್ಟರ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಬಿ.ವ್ಹಿ.ಗೀತಾ ಆಗಮಿಸಲಿದ್ದಾರೆಂದರು.

ಸಾವಯುವ ಕೃಷಿ ದೀಕ್ಷಾ ಕಾರ್ಯಕ್ರಮದಲ್ಲಿ ಈಶ್ವರಪ್ಪ ಉಳ್ಳಾಗಡ್ಡಿ, ಪಾರಂಪರಿಕ ವೈದ್ಯರಾದ ಡಾ. ಹನುಮಂತಪ್ಪ ಮಳಲಿ, ವರದಶ್ರೀ ಫೌಂಡೇಶನ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಉಪಸ್ಥಿತರಿರಲಿದ್ದಾರೆ ಎಂದರು.

ಈ ಸಾವಯುವ ದೀಕ್ಷಾ ಕಾರ್ಯಕ್ರಮದಲ್ಲಿ ಸುಮಾರು ಮೂರುಸಾವಿರಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದರು.

ಈಗಾಗಲೇ 10 ಕ್ಕೂ ಹೆಚ್ಚು ದೇಶಿಯ ಗೋತಳಿ ಗೋವುಗಳನ್ನು ಗೋಶಾಲೆಯಲ್ಲಿ ಪೆÇೀಷಣೆ ಮಾಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಮೆಹರವಾಡೆ, ಗುರು ಬನ್ನಿಕೊಪ್ಪ, ಬಸವರಾಜ ಸಗರದ ಉಪಸ್ಥಿತರಿದ್ದರು.