ದಿ.4 ರಂದು ಧರ್ಮಗುರುಗಳ ಸಮಾವೇಶ


ಹುಬ್ಬಳ್ಳಿ,ಡಿ.2: ತಾಲೂಕಿನ ಪಾಳೆ ಗ್ರಾಮದ ಬಾಷಾ ಪೀರನ್ ದರ್ಗಾದಲ್ಲಿ ಧರ್ಮಗುರುಗಳ ಸಮಾವೇಶವನ್ನು ಡಿ. 4ರಂದು ಸಂಜೆ 7ಗಂಟೆಗೆ ಏರ್ಪಡಿಸಲಾಗಿದೆ ಎಂದು ಧರ್ಮಗುರು ಸೈಯದ್ ತಾಜುದ್ದೀನ್ ಖಾದ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಚಿವರಾದ ಎಚ್.ಕೆ. ಪಾಟೀಲ, ಜಮೀರ್ ಅಹ್ಮದ್ ಖಾನ್, ಮಾಜಿ ಸಿಎಂ ಜಗದೀಶ ಶೆಟ್ಟರ್ ಇತರರು ಆಗಮಿಸುವರು ಎಂದರು.
ದೇಶದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ಧರ್ಮಗುರುಗಳು ಈ ಸಮಾವೇಶದಲ್ಲಿ ಭಾಗವಹಿಸುವರು. ವಿಶ್ವದ ಶಾಂತಿಗಾಗಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
ಖಾಜಾಮೈನುದ್ದೀನ್ ಪಟ್ಟಣವಾಲೆ, ಬಾಬಾಜಾನ್ ಮುಧೋಳ, ಸಿರಾಜ್ ಅಹ್ಮದ್ ಕುರ್ಚಿವಾಲೆ, ನಜೀರ್ ಅಹ್ಮದ್ ಕೋಲ್ಕರ್, ಜಾಕೀರ ಸುದ್ದಿಗೋಷ್ಠಿಯಲ್ಲಿದ್ದರು.