ದಿ. 4 ರಂದು ಉದ್ಘಾಟನೆ

ಹುಬ್ಬಳ್ಳಿ,ಜೂ2 : ನಗರದ ವಿದ್ಯಾನಗರದಲ್ಲಿ ಬ್ಯಾಂಕರ್ಸ್ ಕ್ಲಬ್ ನ ಬ್ಯಾಂಕರ್ಸ್ ಭವನದ ಉದ್ಘಾಟನೆಯನ್ನು ಜೂನ್ 4 ರಂದು ಬೆ. 10 ಗಂಟೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ನೆರವೇರಿಸಲಿದ್ದಾರೆ ಎಂದು ಬ್ಯಾಂಕರ್ಸ್ ಕ್ಲಬ್ ನ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಎಂ. ವಿಜಯಕುಮಾರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾದ ಶ್ರೀಕಾಂತ ಭಂಡಿವಾಡ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ ಜವಳಿ, ಉತ್ತರ ಕರ್ನಾಟಕ ಸಣ್ಣ ಉದ್ದಿಮೆದಾರರ ಸಂಘದ ಅಧ್ಯಕ್ಷರಾದ ಜಗದೀಶ್ ಮಠದ ಹಾಗೂ ಸುರೇಶ ಎಂಟರ್ಪ್ರೈಸಸ್ ಲಿಮಿಟೆಡ್ ಎಂ.ಡಿ.ಸುರೇಶ ಶೇಜವಾಡ್ಕರ್ ಆಗಮಿಸಲಿದ್ದಾರೆ ಎಂದರು.

1999 ರಲ್ಲಿ ಬಾಂಕರ್ಸ್ ಕ್ಲಬ್ ಸ್ಥಾಪನೆಗೊಂಡು ಈದೀಗ ಹು-ಧಾ ಜನತೆಗೆ ಉಪಯೋಗವಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಬ್ಯಾಂಕರ್ಸ್ ಕ್ಲಬ್ ನ ಮುಖ್ಯ ಧ್ಯೇಯವಾಗಿದ್ದು, ಬ್ಯಾಂಕ್ ಉದ್ಯೋಗ ಆಕಾಂಕ್ಷೆಗಳಿಗೆ ಟ್ರೇನಿಂಗ್ ಕೊಡುವುದು. ಬಿಜಿನೆಸ್ ಸಂಸ್ಥೆಗಳಿಗೆ ಅಡಿಟ್ ಸೇವೆ ಕೊಡುವುದು, ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಉಪಯುಕ್ತ ಮಾಹಿತಿ ನೀಡುವುದರೊಂದಿಗೆ ಅಲ್ಲದೇ ಮನರಂಜನೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಗಳಿಗೆ ಅನುಕೂಲಕರವಾಗಲಿದೆ ಎಂದರು.

ಇನ್ನೂ ಉದ್ಘಾಟನೆಯ ಸವಿನೆನಪಿಗಾಗಿ ಕ್ಲಬ್ ನ ಉಪಾಧ್ಯಕ್ಷರಾದ ರಮೇಶ ಪರ್ವತಿಕರ ಇವರ ನೇತೃತ್ವದಲ್ಲಿ ಸ್ಮರಣ ಸಂಚಿಕೆ ವಿತ್ತಚೇತನ ಹೊರ ಬರುತ್ತಿರುವುದು ಕೂಡ ಸಂತಸ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಮೇಶ್ ಪ್ರವಾಟಿಕರ್, ಪ್ರದೀಪ್ ಯಾವಗಲ್, ಕಾರ್ಯದರ್ಶಿ ಬಿ.ಎಸ್. ಬಿರಾದಾರ ಸೇರಿದಂತೆ ಉಪಸ್ಥಿತರಿದ್ದರು.